Bidar | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗಾಗಿ ಮನವಿ

ಸಾಂದರ್ಭಿಕ ಚಿತ್ರ
ಬೀದರ್: ನಗರದ ಡೊಮಿನೋಸ್ ಅಂಗಡಿಯ ಜನರೇಟರ್ ರೂಮ್ನಲ್ಲಿ ಸುಮಾರು 45 ರಿಂದ 50 ವರ್ಷದ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತನ ಗುರುತು ಹಾಗೂ ವಾರಸುದಾರರ ಬಗ್ಗೆ ಮಾಹಿತಿ ನೀಡುವಂತೆ ನೂತನ ನಗರ ಪೊಲೀಸ್ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ಏಪ್ರಿಲ್ 21ರಂದು ಬೆಳಿಗ್ಗೆ 1:45ರ ಸುಮಾರಿಗೆ ಮಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಹಾಕಲು ತೆರಳಿದ್ದ ಸಿಬ್ಬಂದಿಗೆ ಜನರೇಟರ್ ರೂಮ್ ಒಳಗಿನಿಂದ ರಕ್ತ ಹರಿದು ಬರುತ್ತಿರುವುದು ಕಂಡುಬಂದಿದೆ. ತಕ್ಷಣ ಪರಿಶೀಲಿಸಿದಾಗ ಒಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಮೈಮೇಲೆ ಯಾವುದೇ ಬಟ್ಟೆಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಮಳಿಗೆಯ ಸ್ಟೋರ್ ಮ್ಯಾನೇಜರ್ ಲಕ್ಷ್ಮಯ್ಯ (24) ನೀಡಿದ ದೂರಿನ ಮೇರೆಗೆ ಬೀದರ್ ನೂತನ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 15/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪರಿಚಿತ ಶವದ ಗುರುತು ಅಥವಾ ವಾರಸುದಾರರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಬೀದರ್ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊಬೈಲ್ ಸಂಖ್ಯೆ 9480803446 ಅಥವಾ ಬೀದರ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08482-226704 ಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.






