Bidar | ಕಂಗನಕೋಟ ಗ್ರಾಮದಲ್ಲಿ ಮಳೆಗಾಗಿ ಬುಟ್ಟಿ ಜಾತ್ರೆ

ಬೀದರ್: ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಬೀದರ್ ತಾಲೂಕಿನ ಕಂಗನಕೋಟ ಗ್ರಾಮದಲ್ಲಿ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಬುಟ್ಟಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು.
ಜಾತ್ರೆಯ ಅಂಗವಾಗಿ ಗ್ರಾಮದ ರೈತರು ಜಾತಿ-ಭೇದ ಮರೆತು ಒಗ್ಗಟ್ಟಿನಿಂದ ಸಿದ್ದೇಶ್ವರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರೆಲ್ಲರೂ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡು ಸಾಮಾಜಿಕ ಸಾಮರಸ್ಯ ಹಾಗೂ ಏಕತೆಯ ಸಂದೇಶ ಸಾರಿದರು.
ಜಾತ್ರೆಯ ಅಂಗವಾಗಿ ಮಹಿಳೆಯರಿಗೆ ಕಬಡ್ಡಿ, ಖೋ-ಖೋ ಹಾಗೂ ಬುಲಾಯಿ ಪದ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರ ಕೋಲಾಟ ವಿಶೇಷ ಆಕರ್ಷಣೆಯಾಗಿದ್ದು, ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಿದ್ದೇಶ್ವರ್ ಟ್ರಸ್ಟ್‌ನ ಅಧ್ಯಕ್ಷ ಕೇದಾರನಾಥ್ ಶಂಭು, ಕಾರ್ಯದರ್ಶಿ ಧನಶೆಟ್ಟಿ ಶಂಭು, ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಓಂಕಾರ್ ಪಾಟೀಲ್, ವಿಜಯಕುಮಾರ್, ನಿಜಗುಣ, ಕಂಟೆಪ್ಪ ಓತಿ, ಕಮಲಾಕರ್ ಶಂಭು, ಸುನೀಲ್ ಭುಳ್ಳ, ಶಿವು, ಅಶೋಕ್, ಬಾಬು ಮಲಶೆಟ್ಟಿ, ಸಚಿನ್, ಪುತಳಾಬಾಯಿ, ಸಂಗೀತಾ ಓತಿ, ಪ್ರೇಮಲತಾ ಹಾಗೂ ಶಾರದಾಬಾಯಿ ಸೇರಿದಂತೆ ಗ್ರಾಮದ ಪ್ರಮುಖರು, ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.




