ಬೀದರ್ | ಕೇಬಲ್ ಕಳವು ಪ್ರಕರಣ : 6 ಜನ ಆರೋಪಿಗಳ ಬಂಧನ; 74 ಸಾವಿರ ರೂ. ಮೌಲ್ಯದ ಕೇಬಲ್ ಜಪ್ತಿ

ಭಾಲ್ಕಿ: ತಾಲೂಕಿನ ವಿವಿಧ ರೈತರ ಹೊಲಗಳಲ್ಲಿ ಮೋಟಾರ್ ಪಂಪ್ಸೆಟ್ಗಳ ಕೇಬಲ್ ಕಳವು ಮಾಡುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು, 74 ಸಾವಿರ ರೂ. ಮೌಲ್ಯದ 840 ಫೀಟ್ ಕೇಬಲ್ ಅನ್ನು ಜಪ್ತಿ ಮಾಡಿದ್ದಾರೆ.
ಬ್ಯಾಲಹಳ್ಳಿ, ಕಣಜಿ, ನೀಲಮನಳ್ಳಿ ಸೇರಿದಂತೆ ವಿವಿಧೆಡೆ ರೈತರ ಹೊಲಗಳಲ್ಲಿ ಕಳೆದ ಹಲವು ದಿನಗಳಿಂದ ಮೋಟಾರ್ ಮತ್ತು ಪಂಪ್ಸೆಟ್ಗಳಿಗೆ ಅಳವಡಿಸಿದ್ದ ಕೇಬಲ್ ಕಳವು ಆಗಿದ್ದವು. ಈ ಹಿನ್ನೆಲೆಯಲ್ಲಿ ಕೇಬಲ್ ಕಳವು ಆಗುತ್ತಿರುವ ಬಗ್ಗೆ ರೈತರು ಧನ್ನೂರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ರಾಜಕುಮಾರ್ ಅವರು ತಿಳಿಸಿದ್ದಾರೆ.
Next Story




