ಬೀದರ್ | ಲಾಧಾ ಗ್ರಾಮದಲ್ಲಿ ORBIT ಸಂಸ್ಥೆಯಿಂದ ಕ್ಯಾನ್ಸರ್ ತಪಾಸಣಾ ಶಿಬಿರ

ಬೀದರ್ : ಭಾಲ್ಕಿ ತಾಲ್ಲೂಕಿನ ಲಾಧಾ ಸಮುದಾಯ ಆರೋಗ್ಯ ಉಪ ಕೇಂದ್ರದಲ್ಲಿ ORBIT ಸಂಸ್ಥೆ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ಜು.7ರಂದು ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಒಟ್ಟು 92 ಫಲಾನುಭವಿಗಳಿಗೆ ಕ್ಯಾನ್ಸರ್ ತಪಾಷಣೆ ಮಾಡಲಾಯಿತು.
ಶಿಬಿರದಲ್ಲಿ ಡಾ.ಜ್ಯೋತಿ ಅವರು ಮಾತನಾಡಿ, ಬಾಯಿ ಅಥವಾ ನಾಲಿಗೆ ಹುಣ್ಣು, ಕೆಮ್ಮು, ಕೊಕ್ಕಿನ ಧ್ವನಿ 3 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ ತಕ್ಷಣವೇ ವೈದ್ಯರ ಹತ್ತಿರ ತೆರಳಿ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ವ್ಯವಸ್ಥಾಪಕಿ ಕ್ರಿಸ್ಟಿನಾ ಅವರು ಮಾತನಾಡಿ, ಮದ್ಯಪಾನ, ಧೂಮಪಾನ ಅಥವಾ ಗುಟ್ಕಾ ಸೇವನೆಯಿಂದ ಕ್ಯಾನ್ಸರ್ ರೋಗವು ಅತೀ ವೇಗವಾಗಿ ಹುಟ್ಟುತ್ತದೆ. ಜನರು ಈ ದುಷ್ಚಟಗಳಿಂದ ದೂರವಿದ್ದು, ಕ್ಯಾನ್ಸರ್ ರೋಗದಿಂದ ಬಚಾವಗಬೇಕು. ದುಷ್ಚಟಗಳು ಆರೋಗ್ಯಕ್ಕೆ ಹಾನಿಕಾರವಾಗಿವೆಯೇ ವಿನಃ ಒಳ್ಳೆಯದಲ್ಲ. ಹಾಗಾಗಿ ಜನರು ದುಷ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಅಮರ್, ಪ್ರದೀಪ್, ಯೋಹಾನ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಜಿಲ್ಲಾ ಸಂಯೋಜಕಿ ಶ್ರೀನಿಧಿ, ಸಮುದಾಯ ಆರೋಗ್ಯ ಅಧಿಕಾರಿ ಅಂಬರೀಷ್ ಕೊಟ್ಟೆ, ಸುವರ್ಣ ಹಲ್ಗೆ ಹಾಗೂ ಕಿರಿಯ ಆರೋಗ್ಯ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಗ್ರಾಮ ಪಂಚಾಯತ್ ಸಿಬ್ಬಂದಿ, ಸರಕಾರಿ ಶಾಲೆಯ ಶಿಕ್ಷಕರು ಸೇರಿದಂತೆ ಇತರರು ಇದ್ದರು.





