ಬೀದರ್ | ನಗರಸಭೆ ಆವರಣದಲ್ಲಿ ಕಾರಿಗೆ ಬೆಂಕಿ : ಸುಟ್ಟು ಕರಕಲು

ಬೀದರ್ : ಜಿಲ್ಲೆಯ ನಗರ ಸಭೆ ಕಾರ್ಯಲಯದ ಆವರಣದಲ್ಲಿ ಇಂದು ಸುಮಾರು ಮಧ್ಯಾಹ್ನ 1 ಗಂಟೆಗೆ ಟಾಟಾ ವಿಸ್ಟಾ ಕಾರಿಗೆ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿದೆ.
ನಗರಸಭೆ ಮಾಜಿ ಉಪಾಧ್ಯಕ್ಷ ಅಂಬರೀಶ್ ಸ್ವಾಮಿ ಅವರಿಗೆ ಈ ಕಾರು ಸೇರಿದೆ ಎನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದ್ದು, ಬೆಂಕಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
Next Story





