ಬೀದರ್ | ಕಾರು ಢಿಕ್ಕಿ : ಪಾದಚಾರಿ ಸ್ಥಳದಲ್ಲೇ ಮೃತ್ಯು

ಭೀಮಣ್ಣ
ಬೀದರ್ : ನಗರದ ಕುಂಬಾರವಾಡ ಬಡಾವಣೆಯಲ್ಲಿ ಕಾರೊಂದು ಢಿಕ್ಕಿ ಹೊಡೆದು ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.
ಮೃತರನ್ನು ನಗರದ ಕುಂಬಾರವಾಡ ಬಡಾವಣೆಯ ನಿವಾಸಿ ಭೀಮಣ್ಣ (76) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು 5:30 ಗಂಟೆಗೆ ವ್ಯಕ್ತಿಯೊಬ್ಬರು ಭೀಮಣ್ಣ ಬಡಾವಣೆಯಲ್ಲಿ ವಾಕಿಂಗ್ ಮಾಡುತಿದ್ದರು. ಈ ವೇಳೆ ಹಿಂದಿನಿಂದ ರಭಸವಾಗಿ ಬಂದ ಕಾರು ಭೀಮಣ್ಣ ಅವರ ಮೇಲೆ ಹರಿದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರು ಅವರ ಮೇಲೆ ಹರಿದ ದೃಶ್ಯವು ಪಕ್ಕದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Next Story





