ಬೀದರ್ | ಕಾರಿನ ಗಾಜು ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ : ಪ್ರಕರಣ ದಾಖಲು

ಬೀದರ್ : ಬಸವಕಲ್ಯಾಣದಲ್ಲಿರುವ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿ ನೋಡಲು ಹೋಗಿದ್ದಾಗ, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಕಾರಿನ ಗಾಜು ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಬಾಳುರ್ ನಿವಾಸಿಯಾದ ದಯಾನಂದ್ ಅವರಿಗೆ ಸೇರಿದ ಚಿನ್ನಾಭಾರಣ ಕಳ್ಳತನವಾಗಿದೆ. ನನ್ನ ಭಾವನಿಗೆ ಹುಡುಗಿ ನೋಡಲು ಬಸವಕಲ್ಯಾಣಕ್ಕೆ ಹೋಗಿ ಬರುವಾಗ ಹತ್ತಿರದ ಬಸವಣ್ಣನವರ ಮೂರ್ತಿ ನೋಡಲು ಹೊರಗಡೆ ಕಾರ್ ಪಾರ್ಕಿಂಗ್ ಮಾಡಿ ಮೂರ್ತಿ ನೋಡಲು ಹೋಗಿದ್ದೆವು. ಮೂರ್ತಿ ನೋಡಿ ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಒಳಗಿದ್ದ 1 ಲಕ್ಷ 20 ಸಾವಿರ ರೂ. ಮೌಲ್ಯದ ಚಿನ್ನದ ನಕ್ಲೆಸ್, 80 ಸಾವಿರ ರೂ. ಮೌಲ್ಯದ 5 ಗ್ರಾಂ ತೂಕದ ಎರಡು ಚಿನ್ನದ ಉಂಗುರು, 64 ಸಾವಿರ ರೂ. ಮೌಲ್ಯದ 0.8 ಗ್ರಾಂ ತೂಕದ ಸರಪಳ್ಳಿ ಮತ್ತು ಕಿವಿಯೋಲೆ ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.





