ಬೀದರ್ | ಜಾತಿ ನಿಂದನೆ ಮಾಡಿ ಹಲ್ಲೆ ಆರೋಪ: ಪ್ರಕರಣ ದಾಖಲು

ಬೀದರ್ : ಧಮ್ಮಚಕ್ರ ಪರಿವರ್ತನ ದಿವಸದ ನಿಮಿತ್ತ ಬೈಕ್ ಗೆ ನೀಲಿ ಧ್ವಜ ಕಟ್ಟಿಕೊಂಡು ಭಾಲ್ಕಿ ತಾಲೂಕಿನ ಹಲಸಿ ತುಗಾಂವ್ ಗ್ರಾಮದಿಂದ ಮಹಾರಾಷ್ಟ್ರದ ಉದಗಿರ್‌ನಲ್ಲಿರುವ ಬೌದ್ಧ ವಿಹಾರಕ್ಕೆ ಸಾಗುತ್ತಿರುವಾಗ, ಮಾರ್ಗ ಮಧ್ಯದ ಆಳವಾಯಿ ಗ್ರಾಮದಲ್ಲಿನ ಯುವಕರು ಜಾತಿ ನಿಂದನೆ ಮಾಡಿ ಥಳಿಸಲಾಗಿದೆ ಎಂದು ಯುವಕನೊಬ್ಬ ಆರೋಪಿಸಿರುವ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್ಟಿ ಕಾಯ್ದೆ ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಆಳವಾಯಿ ಗ್ರಾಮದ ಪಾಂಡುರಂಗ್ (25), ಕಿರಣ್ (26) ಹಾಗೂ ಅಭಿನಂದನ್ (26) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲಸಿ ತುಗಾಂವ್ ಗ್ರಾಮದ ನಿವಾಸಿ ಲಕ್ಷ್ಮಣ್ ಮೂಳೆ ಎನ್ನುವ ಯುವಕ ದೂರು ನೀಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





