ಬೀದರ್ : ಮಾಹಿತಿ ಹಕ್ಕಿನಡಿ ದಾಖಲೆ ನೀಡದ್ದಕ್ಕೆ ಸಿಡಿಪಿಒ ಗೆ 25 ಸಾವಿರ ರೂ. ದಂಡ

ಸಿ. ಪಿ. ಸೀಗೆದಾರ್
ಬೀದರ್ : ಮಾಹಿತಿ ಹಕ್ಕಿನಡಿ ದಾಖಲೆ ನೀಡದ ಸಿಡಿಪಿಒ ಗೌತಮ್ ಸಿಂಧೆ ಅವರಿಗೆ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ್ ಡಾಕಪ್ಪ ಅವರು 25 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ವಕೀಲ ಸಿ. ಪಿ. ಸೀಗೆದಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ನಗರದ ಬನಶಂಕರಿ ಗಲ್ಲಿಯ ನಿವಾಸಿ ರೇವಣಸಿದ್ಧಯ್ಯ ಅವರು ಅಂಗನವಾಡಿ ಕಾರ್ಯಕರ್ತೆಯಾದ ತಮ್ಮ ತಾಯಿಯ ನಿಧನರಾದಾಗ ಅವರ ಹೆಸರಿನಲ್ಲಿ ಪಿಂಚಣಿ ಹಣಕ್ಕಾಗಿ ಸಲ್ಲಿಸಿದ ದಾಖಲೆಗಳು ಒದಗಿಸಬೇಕು ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಿಗದಿತ ಸಮಯದಲ್ಲಿ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡಲಿಲ್ಲ ಎಂದು ತಿಳಿದು ಬಂದಿದೆ.
ಅದೆಷ್ಟೋ ಕಚೇರಿಗಳಲ್ಲಿ ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡುತ್ತಿಲ್ಲ. ಅವರಿಗೆಲ್ಲ ಇದು ಪಾಠವಾಗಬೇಕು. ಸಾರ್ವಜನಿಕಕರಲ್ಲಿ ಜಾಗೃತಿ ಮೂಡಬೇಕು ಎಂದು ವಕೀಲರು ತಿಳಿಸಿದ್ದಾರೆ.
Next Story





