ಬೀದರ್ | ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಿಇಓ ಡಾ.ಗಿರೀಶ್ ಬದೋಲೆ
ಜಲಜೀವನ್ ಮೀಷನ್ ಕಾಮಗಾರಿ ಪರಿವೀಕ್ಷಣೆ

ಬೀದರ್ : ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಿಇಓ ಡಾ.ಗಿರೀಶ್ ಬದೋಲೆ ಅವರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು.
ಇಂದು ಭಾಲ್ಕಿ ತಾಲ್ಲೂಕಿನ ಅಳವಾಯಿ, ಮೇಹಕರ್, ಅಟ್ಟರ್ಗಾ ಹಾಗೂ ಸಾಯಿಗಾಂವ್ ತಾಂಡಾ ಗ್ರಾಮಗಳ ಜಲ ಜೀವನ ಮೀಷನ್ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿ ಮಾತನಾಡಿದರು.
ಯೋಜನೆಯಡಿ ಕೈಗೊಳ್ಳಲಾಗುವ WTP, Jackwell, Sump, MBR, Rising main, Distribution & Water source ಗಳನ್ನು ಪರಿಶೀಲಿಸಿದ ಅವರು, ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಭಾಲ್ಕಿಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.
ಅಟ್ಟರ್ಗಾ ಗ್ರಾಮ ಪಂಚಾಯತಿಯ ಅಟ್ಟರ್ಗಾ ಗ್ರಾಮ ಹಾಗೂ ಸಾಯಗಾಂವ್ ಗ್ರಾಮ ಪಂಚಾಯತಿಯ ಸಾಯಗಾಂವ್ ತಾಂಡಾ ಗ್ರಾಮದ ಜಲಜೀವನ ಮೀಷನ್ ಯೋಜನೆಯ ಎಕ ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಲಾಗಿದ್ದು, ಈ ಗ್ರಾಮಗಳ ಕಾಮಗಾರಿಗಳು ಇಗಾಗಲೇ ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಿ, ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾಲ್ಕಿ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದಾರ್, ಭಾಲ್ಕಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಣಿಕರಾವ್ ಕೇರೂರೆ ಹಾಗೂ ಜಿಲ್ಲಾ ಪಂಚಾಯತ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪತ್ರು ಜೇ. ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಶಾಖಾಧಿಕಾರಿ ಅಳವಾಯಿ, ಅಟ್ಟರ್ಗಾ, ಮೇಹಕರ್ ಮತ್ತು ಸಾಯಿಗಾಂವ್ ಗ್ರಾಮಗಳ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.







