ಹೋರಾಟಗಾರರ ಮೇಲೆ ಪೋಲಿಸರ ದೌರ್ಜನ್ಯ ಖಂಡಿಸಿ ಜೂ.19 ರಂದು ಬೀದರ್ ಚಲೋ ಚಳುವಳಿ: ವಿಷ್ಣುವರ್ಧನ್ ವಾಲದೊಡ್ಡಿ

ಬೀದರ್ : ಹೋರಾಟಗಾರರ ಮೇಲೆ ಪೋಲಿಸರ ದೌರ್ಜನ್ಯ ಖಂಡಿಸಿ ಜೂ.19 ರಂದು ಬೀದರ್ ಚಲೋ ಎಂಬ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತಿದೆ ಎಂದು ಕರ್ನಾಟಕ ಭೀಮ ಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲದೊಡ್ಡಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಮ್ಮ ತಮ್ಮ ಹಕ್ಕುಗಳಿಗೆ ಹೋರಾಡುವ ಹೋರಾಟಗಾರರ ಮೇಲೆ ದಿನಕ್ಕೊಂದು ಪ್ರಕರಣ ದಾಖಲಿಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಷಡ್ಯಂತ್ರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೋಲಿಸರ ಈ ದೌರ್ಜನ್ಯ ಖಂಡಿಸಿ ಜೂ.19 ರಂದು ಬೀದರ್‌ಗೆ ರಾಜ್ಯದ ವಿವಿಧೆಡೆಯಿಂದ 5 ಸಾವಿರ ಪ್ರತಿಭಟನಾಕಾರರು ಆಗಮಿಸಲಿದ್ದು, ಬೀದರ್ ಚಲೊ ಎಂಬ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
ಟೌನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ವಿಚಾರವಾಗಿ ಅಲ್ಲಿಯ ಪೋಲಿಸ್ ಅಧಿಕಾರಿಗಳಿಗೆ ತಿಳಿಸಿದರೆ, ಎರಡು ದಿನ ಬಂದ್ ಆಗುತ್ತದೆ. ನಂತರ ಮತ್ತೆ ತನ್ನಿಂದ ತಾನೆ ಪುನ್ಹ ಮಾರಾಟ ಮುಂದುವರೆಯುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಅಮರೇಶ್ ಕುದರೆ ಹಾಗೂ ಮುಖಂಡ ಅಮೃತ್ ಮುತ್ತಂಗಿಕರ್ ಇದ್ದರು.





