ಬೀದರ್ | ಚಾಂಬೋಳ್ ಗ್ರಾಮ ಪಂಚಾಯತ್ ಅಧ್ಯಕ್ಷೆಗೆ ಜಾತಿ ನಿಂದನೆ ಆರೋಪ : ಪ್ರಕರಣ ದಾಖಲು

ಬೀದರ್ : ಚಾಂಬೋಳ್ ಗ್ರಾಮ ಪಂಚಾಯತ್ ಸದಸ್ಯ ಧನರಾಜ್ ಪಾಟೀಲ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅದೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ಅವರು ದೂರು ನೀಡಿದ್ದು, ಬುಧವಾರ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಸೆ.2 ರಂದು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಜೆ.ಜೆ.ಎಂ (ವಾಟರ್ ಸಪ್ಲಾಯ್) ಸಂಬಂಧಿಸಿದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜೆ.ಜೆ.ಎಂ ಕಾಮಗಾರಿ ಸರಿಯಾಗಿ ಆಗದ ಕಾರಣ ಪಂಚಾಯತ್ ಗೆ ಹಸ್ತಾಂತರ ಮಾಡಿಕೊಳ್ಳುವುದಿಲ್ಲ ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಈ ವೇಳೆ ಧನರಾಜ್ ಪಾಟೀಲ್ ಅವರು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸುರೇಖಾ ಅವರು ದೂರಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜನವಾಡ ಪೊಲೀಸ್ ಠಾಣೆಯಲ್ಲಿ ಎಸ್. ಸಿ., ಎಸ್. ಟಿ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Next Story





