ಬೀದರ್ | ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಗು ಆರೈಕೆ ಕೊಠಡಿ ಉದ್ಘಾಟನೆ

ಬೀದರ್ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಗು ಆರೈಕೆ ಕೊಠಡಿಯನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಉದ್ಘಾಟಿಸಿದರು.
ಮಗು ಆರೈಕೆ ಕೊಠಡಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿಗಳ ಕಚೇರಿಗೆ ವಿವಿಧ ಅಹವಾಲು ಸಲ್ಲಿಸಲು ಹಾಗೂ ಇತರೇ ಕಾರ್ಯಗಳಿಗೆ ಚಿಕ್ಕ ಮಕ್ಕಳೊಂದಿಗೆ ಆಗಮಿಸುವ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆ ಮಗು ಆರೈಕೆ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದರು.
ಚಿಕ್ಕ ಮಕ್ಕಳಿಗೆ ಗಮನ ಸೆಳೆಯಲು ಆಟಿಕೆಗಳನ್ನು ಇಡಲಾಗಿದೆ. ಗೋಡೆಯ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಲಾಗಿದ್ದು ಮಕ್ಕಳ ಆರೈಕೆಗೆ ಅನುಕೂಲವಾಗಲಿದೆ. ಕಚೇರಿಗೆ ಆಗಮಿಸುವ ತಾಯಂದಿರು ಮಕ್ಕಳ ಆರೈಕೆಗೆ ಈ ಕೊಠಡಿಯನ್ನು ಬಳಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಮಹಿಳಾ ಮಕ್ಕಳ ಇಲಾಖೆಯ ಅಧಿಕಾರಿ ಶ್ರೀಧರ್, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story





