ಬೀದರ್ | ಕಾರು-ಗೂಡ್ಸ್ ವಾಹನದ ನಡುವೆ ಢಿಕ್ಕಿ : ಇಬ್ಬರು ಮೃತ್ಯು

ಬೀದರ್ : ಕಾರು ಮತ್ತು ಗೂಡ್ಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೆಡ್ ಬಿ ಗ್ರಾಮದ ಹತ್ತಿರ ನಡೆದಿದೆ.
ಕಲಬುರಗಿ ಜಿಲ್ಲೆ ಕಮಲಾಪೂರ ತಾಲ್ಲೂಕಿನ ನಾಗೂರ ಗ್ರಾಮದ ನಿವಾಸಿಯಾದ ಜಗನ್ನಾಥ್ (35) ಹಾಗೂ ಬೀದರ್‌ನ ಎಂ.ಡಿ. ಇಸ್ಮಾಯಿಲ್ (45) ಮೃತಪಟ್ಟ ವ್ಯಕ್ತಿಗಳು ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಹಳ್ಳಿಖೆಡ್ ನ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಹತ್ತಿರ ಇರುವ ಬ್ರಿಡ್ಜ್ ಮೇಲೆ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಹಳ್ಳಿಖೆಡ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Next Story







