ಬೀದರ್ | ಆ.2, 3ರಂದು ʼಪ್ರಸುತಿ, ಸ್ತ್ರೀ ರೋಗಗಳʼ ಬಗ್ಗೆ ಕಾರ್ಯಾಗಾರ, ಸಮ್ಮೇಳನ : ಡಾ.ಹೇಮಲತಾ ಪಾಟೀಲ್

ಬೀದರ್ : ಆ.2 ಮತ್ತು 3ರಂದು ನಗರದ ಬ್ರಿಮ್ಸ್ ಕಾಲೇಜು ಅವರಣದ ಅಡಿಟೊರಿಯಮ್ ಹಾಲ್‌ನಲ್ಲಿ ಪ್ರಸುತಿ ಮತ್ತು ಸ್ತ್ರೀ ರೋಗಗಳ ಬಗ್ಗೆ ಎರಡು ದಿವಸದ ಕಾರ್ಯಾಗಾರ ಹಾಗೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಸಂಘಟನಾ ಕಾರ್ಯದರ್ಶಿ ಡಾ.ಹೇಮಲತಾ ಪಾಟೀಲ್ ಅವರು ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯದವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಾಗಾರ ಮತ್ತು ಸಮ್ಮೇಳನ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಮೂಲೆ, ಮೂಲೆಗಳಿಂದ ನುರಿತ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳು ಆಗಮಿಸುವರು. ಜಿಲ್ಲೆಯ ಸ್ತ್ರೀ ರೋಗ ತಜ್ಞರು, ಮಕ್ಕಳ ರೋಗ ತಜ್ಞರು ಹಾಗೂ ಅವರಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಈ ತರಬೇತಿ ನೀಡಲಾಗುವುದು. ಬ್ರಿಮ್ಸ್ ನಲ್ಲಿನ ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.
ಸಂಘದ ಉಪಾಧ್ಯಕ್ಷೆ ಡಾ.ಲಲಿತಮ್ಮ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಸವಿತಾ ಬಡಿಗೇರ್, ಸಂಘದ ಖಜಾಂಚಿ ಡಾ.ಶಾರದಾ ಗುದಗೆ ಇದ್ದರು.







