ಬೀದರ್ | ಗೋಹತ್ಯೆ ಆರೋಪ : ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಬೀದರ್ : ಕಮಲನಗರ್ ಪಟ್ಟಣದ ಹತ್ತಿರ ಕೊಟ್ಟಿಗೆಯೊಂದರಲ್ಲಿ ಗೋಹತ್ಯೆ ನಡೆಸಲಾಗುತ್ತಿದೆ ಎಂದು ಹಿಂದುತ್ವ ಸಂಘಟನೆಗಳಿಂದ ಆರೋಪಿಸಿದ್ದು, ಈ ಹಿನ್ನೆಲೆಯನ್ನು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಯಾಕತ್, ಸದ್ದಾಂ, ರಿಯಾಝ್ ಹಾಗೂ ಉಮರ್ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಮಲನಗರ್ ಪಟ್ಟಣದ ರಾಂಪುರ್ ರಸ್ತೆಯ ಪಕ್ಕದಲ್ಲಿರುವ ಕೊಟ್ಟಿಗೆಯೊಂದರಲ್ಲಿ ಗೋಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ರವಿವಾರ ಹಿಂದುತ್ವ ಸಂಘಟನೆಗಳಿಂದ ಕಮಲನಗರ್ ಪಟ್ಟಣವನ್ನು ಸಂಪೂರ್ಣವಾಗಿ ಬಂದ್ ಮಾಡಿ, ರಸ್ತೆ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು ಗೋಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಘಟನೆ ಕುರಿತು ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗೆಯೇ ರವಿವಾರದ ಸಾಯಂಕಾಲ ಇದಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story