ಬೀದರ್ | ಆರೆಸ್ಸೆಸ್ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಬೀದರ್ : ಆರೆಸ್ಸೆಸ್ ಮತ್ತು ಮನುವಾದಿ ಸಂಘಟನೆಗಳು ದೇಶದಲ್ಲಿ ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಅಸಮಾನತೆಗೆ ಪೋಷಣೆ ನೀಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯಿಂದ ಪ್ರತಿಭಟನೆ ನಡೆಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರಿಗೆ ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು. ಆ ಬಳಿಕ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ ಡಾ. ಅಂಬೇಡ್ಕರ್ ಅವರು ತಮ್ಮ ಕಾಲದಲ್ಲೇ ಆರ್‌ಎಸ್‌ಎಸ್ ಸಂಘಟನೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದರು. ಇವಾಗಲು ಕೂಡ ಆರ್‌ಎಸ್‌ಎಸ್ ಸಂಘಟನೆ ಸಂವಿಧಾನ ಮೌಲ್ಯಗಳಿಗೆ ವಿರೋಧವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲಾಗಿದೆ.
ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ, ವಿಭಾಗ ಸಂಘಟನಾ ಸಂಚಾಲಕ ರಾಕುಮಾರ್ ಬನ್ನಿರ್, ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕ ರಂಜೀತಾ ಜೈನೂರ್, ಝೆರೆಪ್ಪಾ ರಾಂಪೂರೆ, ಬಾಬು ಮಾಲೆ, ಸಂಜಿವಕುಮಾರ್ ಬ್ಯಾಗಿ, ಗೌತಮ್ ಸಾಗರ್, ಗೋಪಾಲ್ ಸಾಗರ್, ಬಸವರಾಜ್ ಕಾಂಬಳೆ, ನಾಗೇಶ್ ಜನವಾಡಾ, ಬಸವರಾಜ್ ಕೋಳಾರ್, ಶ್ರೀಕಾಂತ್ ಸಾಗರ್, ಗೌತಮ್ ಭೋಸ್ಲೆ, ಅಂಬೇಡ್ಕರ್ ಸಾಗರ್ ಹಾಗೂ ನರಸಿಂಗ್ ಸಾಮ್ರಾಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.







