ಬೀದರ್ | ಮರಳು ಶಂಕರದೇವ ಪ್ರಶಸ್ತಿಗೆ ಡಾ. ರಮೇಶ್ ಚವ್ಹಾಣ ಆಯ್ಕೆ

ಬೀದರ್ : ಭಾಲ್ಕಿಯ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ವತಿಯಿಂದ ನೀಡುವ 2025ನೇ ವರ್ಷದ 'ಮರಳು ಶಂಕರದೇವ ಪ್ರಶಸ್ತಿ' ಗೆ ಡಾ.ರಮೇಶ್ ಚವ್ಹಾಣ ಅವರು ಆಯ್ಕೆಯಾಗಿದ್ದಾರೆ.
ಡಾ. ರಮೇಶ್ ಚವ್ಹಾಣ ಅವರು ಮೂಲತಃ ಬಸವಕಲ್ಯಾಣ ತಾಲೂಕಿನ ಕಲ್ಕೋರಾ ತಾಂಡಾದ ನಿವಾಸಿಯಾಗಿದ್ದಾರೆ. ಅವರ ಎರಡು ಪುಸ್ತಕಗಳು ಪ್ರಕಟಗೊಂಡಿದ್ದು, ಎಂಟು ಯುಜಿಸಿ ಕೇರ್ ಲೇಖನಗಳು ಪ್ರಕಟಗೊಂಡಿವೆ.
ನಾಲ್ಕು ವರ್ಷ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಇವರು, ಕಳೆದ ಸುಮಾರು 6 ವರ್ಷಗಳಿಂದ ಕಮಲನಗರದ ಶ್ರೀ ಸಿದ್ದರಾಮೇಶ್ವರ್ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದು, ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
Next Story




