ಬೀದರ್ | ಮದ್ಯ ಸೇವಿಸಿ ವಾಹನ ಚಾಲನೆ: ಚಾಲಕರಿಬ್ಬರಿಗೆ ದಂಡ

ಬೀದರ್ : ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಚಾಲಕರಿಬ್ಬರಿಗೆ ಬಸವಕಲ್ಯಾಣದ ಜೆ ಎಮ್ ಎಫ್ ಸಿ ನ್ಯಾಯಾಲಯವು ದಂಡ ವಿಧಿಸಿದೆ.
ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ ಇಬ್ಬರ ವಿರುದ್ದ ವಿರುದ್ದ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದವು. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಸವಕಲ್ಯಾಣದ ಜೆ ಎಮ್ ಎಫ್ ಸಿ ನ್ಯಾಯಾಲಯವು, ಇಬ್ಬರು ಚಾಲಕರಿಗೆ ತಲಾ 10 ಸಾವಿರ ರೂ. ನಂತೆ ಒಟ್ಟು 20 ಸಾವಿರ ರೂ. ದಂಡ ವಿಧಿಸಿದೆ.
Next Story





