ಬೀದರ್ | ಮಾನವೀಯತೆಗೆ ಮಹತ್ವ ನೀಡುವ ಶಿಕ್ಷಣ ಅಗತ್ಯ: ಸಿಪಿಐ ಅಲಿಸಾಬ್

ಬೀದರ್ : ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಿ, ಮಾನವೀಯತೆಗೆ ಮಹತ್ವ ನೀಡುವ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮನಸ್ಥಿತಿ ನಿರ್ಮಿಸುವ ವಿದ್ಯೆ ಇಂದು ಅಗತ್ಯವಿದೆ ಎಂದು ಸಿಪಿಐ ಅಲಿಸಾಬ್ ಅವರು ಹೇಳಿದರು.
ಸೋಮವಾರ ಬಸವಕಲ್ಯಾಣ ನಗರದ ಬಸವೇಶ್ವರ್ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಆಯೋಜಿಸಿದ್ದ ಅರಿವು ಆಚಾರ ಸಾಮಾಜಿಕ ಹೊಣೆಗಾರಿಕೆ ಕುರಿತ ಉಪನ್ಯಾಸ ಹಾಗೂ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರಮ, ನಿರಂತರ ಅಧ್ಯಯನ ಯಶಸ್ಸಿನ ಮಾರ್ಗವಾಗಿದೆ. ವಿದ್ಯಾವಂತರಾಗುವುದು ಒಂದು ಹಂತವಾದರೆ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ, ಮಾನವೀಯ ಮೌಲ್ಯಗಳು ಉಳಿಸಿಕೊಂಡು ಜೀವನ ನಡೆಸುವುದು ಇನ್ನೊಂದು ಹಂತವಾಗಿದೆ. ವ್ಯಕ್ತಿಯ ಸಾಮಾಜಿಕ ಜೀವನ ಸವಾಲಿನಿಂದ ಕೂಡಿದೆ. ನಮ್ಮ ಒಟ್ಟು ಬದುಕು ಪ್ರಜ್ಞಾಪೂರ್ವಕವಾಗಿ, ಎಚ್ಚರಿಕೆಯಿಂದ ಸಾಗಿಸಬೇಕು ಎಂದರು.
ಪ್ರೊ. ವಿಜಯಲಕ್ಷ್ಮಿ ಗಡ್ಡೆ, ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರಧಾನ ಮಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಪಿಸಿ ಅಧ್ಯಕ್ಷ ಬಸವರಾಜ್ ಕೋರಕೆ, ಕೋಶಾಧ್ಯಕ್ಷ ರಾಜಕುಮಾರ್ ಹೊಳಕುಂದೆ, ಸಹ ಕಾರ್ಯದರ್ಶಿ ವಿವೇಕಾನಂದ್ ಹೊದಲೂರೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಅನಿಲಕುಮಾರ್ ರಗಟೆ, ಚಾರ್ಟೇಡ್ ಅಕೌಂಟೆಂಟ್ ನೇಹಾಲ್ ಸಿಂಗ್, ಡಾ.ರುದ್ರಮಣಿ ಮಠಪತಿ, ಅಶೋಕ್ ರೆಡ್ಡಿ, ಗಂಗಾಧರ್ ಸಾಲಿಮಠ, ಶ್ರೀನಿವಾಸ್ ಉಮಾಪುರೆ, ಚೆನ್ನಬಸಪ್ಪ ಗೌರ್, ಸಚಿನ್ ಬಿಡವೆ, ವಿವೇಕಾನಂದ್ ಶಿಂಧೆ, ಪ್ರವೀಣ್ ಬಿರಾದಾರ್, ಪ್ರಶಾಂತ್ ಬುಡಗೆ, ಕೃಷ್ಣಪ್ಪ ಸದಲಾಪುರ್, ಪವನ್ ಪಾಟೀಲ್, ಪ್ರಭಾಕರ್ ನವಗಿರೆ, ಸುಜಾವುದ್ದಿನ್, ಎಂಡಿ ಜಬಿ, ಗುರುದೇವಿ ಕಿಚಡೆ, ನಾಗವೇಣಿ ವಟಗೆ, ಸಂಗೀತಾ ಮಹಾಗಾವೆ, ಮಯೂರಿ ಪಾಟೀಲ್, ಡಾ.ಬಸವರಾಜ್ ಖಂಡಾಳೆ, ಡಾ.ಶಾಂತಲಾ ಪಾಟೀಲ್ ಹಾಗೂ ರೋಷನ್ ಬಿ ಸೇತಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







