ಬೀದರ್| ಗಣರಾಜ್ಯೋತ್ಸವ ದಿನಾಚರಣೆ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಬೀದರ್ : ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಆಚರಿಸುವ ಗಣರಾಜ್ಯೋತ್ಸವ ದಿನಾಚರಣೆಯ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಶಾಹಗಂಜ್ ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುವ ಸಲುವಾಗಿ ಮಾರುತಿ ಬೌದ್ಧೆ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ 2026ರ ಜ.26ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿಯಾಗಿ ಗಣರಾಜ್ಯೋತ್ಸವ ದಿನಾಚರಣೆ ಸಮಿತಿ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಅಂಬಾದಾಸ್ ಗಾಯಕವಾಡ, ಅಧ್ಯಕ್ಷರಾಗಿ ಮುಕೇಶ್ ರಾಯ್, ಕಾರ್ಯಾಧ್ಯಕ್ಷರಾಗಿ ಉದಯ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಕಾಂಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಸಂಗಮ್ ಹಾಗೂ ಕಾರ್ಯದರ್ಶಿಗಳಾಗಿ ವಿನೋದ್ ಗುಪ್ತಾ, ಪ್ರದೀಪ್ ನಾಟೇಕರ್ ಮತ್ತು ಜನಾರ್ಧನ್ ದೀನೆ ಅವರನ್ನು ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ರಮೇಶ್ ಪಾಸ್ವಾನ್ ಆಯ್ಕೆಯಾದರು.
ಸಲಹಾ ಸಮಿತಿಗೆ ಮಾರುತಿ ಬೌದ್ಧೆ, ಅನಿಲ್ ಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದಿನೇ, ಶಿವಕುಮಾರ್ ನೀಲಿಕಟ್ಟಿ, ಮಹೇಶ್ ಗೋರನಾಳಕರ್, ವಿನಾಯಕ್ ಮಾಳಗೆ, ಅರುಣ್ ಪಟೇಲ್, ರಾಜಕುಮಾರ್ ಬನ್ನೇರ್, ಡಾ. ಕಾಶಿನಾಥ್ ಚೆಲ್ವಾ ಹಾಗೂ ದಶರಥ್ ಗುರು ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಸಂಜುಕುಮಾರ್ ಮೇತ್ರೆ, ಮಾರುತಿ ಕಂಟಿ, ವಿನೋದ್ ಬಂದಿಗೆ, ಮಲ್ಲಿಕಾರ್ಜುನ್ ಮೋಳಕೇರೆ, ರಾಹುಲ್ ಹಾಲೇಪುರ್ಗಾ, ರಮೇಶ್ ಮಂದಕನಳ್ಳಿ, ಅಂಬೇಡ್ಕರ್ ಸಾಗರ್, ಸಾಯಿ ಸಿಂಧೆ, ಸತೀಶ್ ಲಕ್ಕಿ, ಪ್ರಶಾಂತ್ ಭಾವಿಕಟ್ಟಿ, ಮಹೇಂದ್ರಕುಮಾರ್ ಹೊಸಮನಿ, ಅಜಯ್ ದಿನೆ, ಸಚಿನ್ ಬಂದಿಗೆ, ರಾಜಕುಮಾರ್ ಜ್ಯೋತಿ, ಬಾಬುರಾವ್ ಮಿಠಾರೆ, ಝರೇಪ್ಪಾ ರಾಂಪುರೆ, ರಾಜಕುಮಾರ್ ಶೇರಿಕಾರ್, ಸಂಜುಕುಮಾರ್ ಜನವಾಡಕಾರ್, ಸುರೇಶ್ ಜೋಜನಾಕರ್, ಗುಣವಂತ್ ಸಿಂಧೆ ಹಾಗೂ ನರಸಿಂಗ್ ಸಾಮ್ರಾಟ್ ಅವರು ಆಯ್ಕೆಯಾದರೆ, ಪ್ರಚಾರ ಸಮಿತಿಗೆ ಶ್ರೀಧರ್ ಸೋಮನುರ್ ಮತ್ತು ಶ್ರೀನಿವಾಸ್ ದಯಾಳ್ ಅವರು ಆಯ್ಕೆಯಾದರು.
ಸಭೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂವಿಧಾನಾತ್ಮಕ ಮೌಲ್ಯಗಳೊಂದಿಗೆ ಶಾಂತಿ ಹಾಗೂ ಶಿಸ್ತಿನಿಂದ ಆಚರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.







