ಬೀದರ್ | ಪರಿಸರವು ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯ : ಡಾ.ಎಸ್.ವಿ.ಪಾಟೀಲ್

ಬೀದರ್ : ನಾವು ಪರಿಸರದಿಂದ ಬಂದವರು. ಪರಿಸರವು ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯ. ಏಕೆಂದರೆ ಭೂಮಿ ಮೇಲೆ ಜೀವನ ನಡೆಸಲು ಪರಿಸರದಿಂದ ಮಾತ್ರ ಸಾಧ್ಯ ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಇಂದು ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿ, ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಬೀದರ್ ತೋಟಗಾರಿಕೆ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜು.1 ರಿಂದ 5 ರವರೆಗೆ ಜರುಗಲಿರುವ ಸಸ್ಯ ಸಂತೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ, ಪ್ರಾಣಿ, ನೈಸರ್ಗಿಕ ಸಸ್ಯ, ಮರ ಮತ್ತು ಹವಾಮಾನ ಎಲ್ಲವೂ ಪರಿಸರದಲ್ಲಿದೆ. ಪರಿಸರವು ಹವಾಮಾನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕೆಲಸ ಮಾಡುವುದಲ್ಲದೆ, ಜೀವನಕ್ಕೆ ಅಗತ್ಯವಾದ ಎಲ್ಲವನ್ನೂ ಒದಗಿಸುತ್ತದೆ. ಮತ್ತೊಂದೆಡೆ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೂ ಕೂಡ ಪ್ರೋತ್ಸಾಹಿಸಿದೆ. ಜಗತ್ತಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಕಮಲನಗರ ತಾಲ್ಲೂಕಿನ ಪ್ರಗತಿಪರ ರೈತ ರಾಜೇಶ್ ಬಸನಾಳೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಅಬ್ದುಲ್ ಕರೀಮ್ ಎಂ., ವಿಸ್ತರಣಾ ಮುಂದಾಳು ಡಾ.ವಿ.ಪಿ.ಸಿಂಗ್, ಡಾ.ಹರೀಶ್ ಟಿ. ಹಾಗೂ ಡಾ.ಜಾನ್ಹವಿ ಡಿ.ಆರ್. ಸೇರಿದಂತೆ ಮಹಾವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.







