ಬೀದರ್ | ಪ್ರವಾದಿ ಮುಹಮ್ಮದ್ ಅವರ ಬದುಕಿನ ಸಾಧನೆ ಮೇಲೆ ಬೆಳಕು ಚೆಲ್ಲಿದ ಮೇಜಿನ ಮಾತು

ಬೀದರ್: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೀರತ್ ಅಭಿಯಾನ ಅಂಗವಾಗಿ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʻಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)' ಕುರಿತ ಮೇಜಿನ ಮಾತು ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಸಾಧನೆ ಮೇಲೆ ಬೆಳಕು ಚೆಲ್ಲಿತು.
ಪ್ರವಾದಿ ಮುಹಮ್ಮದ್(ಸ) ಅವರು ವಿವಿಧ ಕ್ಷೇತ್ರಗಳಲ್ಲಿ ಅಲ್ಪಾವಧಿಯಲ್ಲೇ ಹೇಗೆ ಅಗಾಧ ಪರಿವರ್ತನೆ ತಂದರು. ಅವರ ಕಾಲದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ, ನೈತಿಕ ನ್ಯಾಯ ವ್ಯವಸ್ಥೆ ಮೊದಲಾದ ರಂಗಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಹಾಗೂ ಆತ್ಮಶುದ್ಧಿ, ಶಿಕ್ಷಣ, ಮಾನವ ಮೌಲ್ಯಗಳ ಕುರಿತಾಗಿಯೂ ಚರ್ಚಿಸಲಾಯಿತು.
ಡಾ. ವಿಜಯ್ ಬಲ್ಲೂರಕರ್, ಡಾ. ವಿಜಯಶ್ರೀ ಬಶೆಟ್ಟಿ, ಡಾ. ಬುಶ್ರಾ ಐಮನ್, ಪಾರ್ವತಿ ಸೋನಾರೆ, ಮೌಲಾನಾ ಅಯ್ಯೂಬ್ ಸಲೀಂ, ವೀರಭದ್ರಪ್ಪ ಉಪ್ಪಿನ್, ಬಿ.ಎಸ್. ಕುದರೆ, ಜಗದೀಶ್ ಬಿರಾದಾರ್, ಪ್ರೊ. ಮನೋಜಕುಮಾರ್, ಬಂಡಯ್ಯ ಸ್ವಾಮಿ, ರೂಪಾ ಬಹೆನ್‍ಜಿ, ಉಪನ್ಯಾಸಕಿ ರೂಪಾರಾಣಿ, ಶಿಕ್ಷಕಿ ಲತಿಕಾ, ಮಹೇಶ್ ಗೋರನಾಳಕರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಕೊನೆಯಲ್ಲಿ ತಮ್ಮ ಅನಿಸಿಕೆ ತಿಳಿಸಿದರು.
ಈ ಸಂದರ್ಭದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝ್ಝಮ್, ಡಾ. ಮಕ್ಸೂದ್ ಚಂದಾ, ಡಾ. ಚಂದ್ರಕಾಂತ್ ಗುದಗೆ, ಡಾ. ಸಿ. ಆನಂದರಾವ್, ಶಂಕರ್ ದೊಡ್ಡಿ, ಆಸ್ಮಾ ಸುಲ್ತಾನಾ, ತೌಹೀದ್ ಸಿಂಧೆ, ರಾಜಕುಮಾರ್ ಹೆಬ್ಬಾಳೆ, ವಿಜಯಕುಮಾರ್ ಸೋನಾರೆ, ಮಚ್ಚೇಂದ್ರ ವಾಘಮಾರೆ, ಮುಹಮ್ಮದ್ ಆರಿಫುದ್ದೀನ್, ಡಾ. ಸೈಯದ್ ಹುಸಾಮುದ್ದೀನ್ ಉಝೇರ್, ಸಿದ್ದು ಫುಲಾರೆ, ಮುಹಮ್ಮದ್ ಸಲಾವುದ್ದೀನ್, ಡಾ. ನವೀದ್ ಇರ್ಷಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಸೈಯದ್ ಅತೀಕುಲ್ಲಾಹ ಕುರ್‍ಆನ್ ಪಠಣ ಮಾಡಿದರು. ಜಮಾ ಅತೆ ಇಸ್ಲಾಮಿ ಹಿಂದ್ ಮಾಧ್ಯಮ ಉಪ ಸಂಚಾಲಕ ಮುಹಮ್ಮದ್ ನಿಝಾಮುದ್ದೀನ್ ವಿಷಯ ಮಂಡಿಸಿದರು. ರಫೀಕ್ ಅಹಮ್ಮದ್ ನಿರೂಪಿಸಿದರು.






