Bidar | ಅನಾಥ ವೃದ್ಧೆ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಬೀದರ್: ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಲೆದಾಡುತ್ತಿದ್ದ ಅಂದಾಜು 70 ವರ್ಷದ ಅನಾಥ ವೃದ್ಧೆಯೊಬ್ಬರು ಪತ್ತೆಯಾಗಿದ್ದು, ಅವರ ಕುಟುಂಬಸ್ಥರ ಅಥವಾ ವಾರಸುದಾರರ ಪತ್ತೆಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಮನವಿ ಮಾಡಿದೆ.
ಹೈದರಾಬಾದ್ ಮೂಲದ ನಿಜಾಮುನ್ನಿಸಾ ಗಂಡ ದಿಲವರಖಾನ್ (70) ಎಂದು ತಿಳಿದುಬಂದಿದೆ. ಮೇ 5ರಂದು ರಾತ್ರಿ ಸುಮಾರು 11:50ಕ್ಕೆ ನಗರದ ಬೊಮ್ಮಗೊಂಡೇಶ್ವರ್ ವೃತ್ತದ ಬಳಿ ವೃದ್ಧೆ ಭಿಕ್ಷೆ ಬೇಡುತ್ತಿರುವುದನ್ನು ಪೊಲೀಸ್ ಸಿಬ್ಬಂದಿ ಗಮನಿಸಿ ರಕ್ಷಣೆ ನೀಡಿದ್ದಾರೆ.
ನಂತರ ಅವರನ್ನು ಮಹಾತ್ಮಾ ಜ್ಯೋತಿಬಾ ಫುಲೆ ವೃದ್ಧಾಶ್ರಮ ನಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿತ್ತು. ಆದರೆ, ವೃದ್ಧೆಗೆ ಹಳೆಯ ಮಾಹಿತಿ ನೆನಪಿಲ್ಲದೇ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಬೀದರ್‌ನ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ಪ್ರಸ್ತುತ ಮೇ 7ರಿಂದ ನಗರದ ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮ ನಲ್ಲಿ ವೃದ್ಧೆಗೆ ಆಶ್ರಯ ಹಾಗೂ ಆರೈಕೆ ಒದಗಿಸಲಾಗಿದೆ.
ವೃದ್ಧೆಯ ಬಗ್ಗೆ ಮಾಹಿತಿ ಇರುವವರು ಅಥವಾ ಕುಟುಂಬಸ್ಥರು ಕಂಡುಬಂದಲ್ಲಿ ಮೊಬೈಲ್ ಸಂಖ್ಯೆ 70193 44950, 08482-223771 ಅಥವಾ ಹಿರಿಯ ನಾಗರಿಕರ ಉಚಿತ ಸಹಾಯವಾಣಿ 1090 ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.




