Bidar | ವಿದ್ಯುತ್ ಅವಘಡದಲ್ಲಿ ಮೃತಪಟ್ಟ ರೋಷನ್ ಕುಟುಂಬಕ್ಕೆ ಜೆಸ್ಕಾಂನಿಂದ 5 ಲಕ್ಷ ರೂ. ಪರಿಹಾರ ವಿತರಣೆ

ಬೀದರ್: ಬರೂರ್ ಗ್ರಾಮದ ರೋಷನ್ ಎಂಬ ಯುವಕ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಮೃತ ಯುವಕನ ಕುಟುಂಬಕ್ಕೆ ಜೆಸ್ಕಾಂ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮೃತ ಯುವಕನ ತಾಯಿಗೆ 5 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ಬೀದರ್ ನಗರದ ಪ್ರತಾಪನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಚೆಕ್ ವಿತರಿಸಿದ ಅವರು, ಮೃತ ಯುವಕನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ತಾಯಿಗೆ ಧೈರ್ಯ ತುಂಬಿದರು.
ಮೃತ ಯುವಕ ರೋಷನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ಶಶಿರೇಖಾ ಪಾಟೀಲ್, ಅಧಿಕಾರಿ ಎಂ.ಡಿ. ಶಯಿದ್, ಮುಖಂಡರಾದ ಅನೀಲಕುಮಾರ್ ಪನ್ನಾಳೆ, ಶಿವಕುಮಾರ್ ಸ್ವಾಮಿ, ಬಾಬುರಾವ್ ಕಾರಬಾರಿ, ದಯಾನಂದ್ ರೆಡ್ಡಿ, ರಾಜಕುಮಾರ್ ಪಾಟೀಲ್, ಶಿವಶರಣಪ್ಪ ತಗಾರೆ, ದೇವೇಂದ್ರ ಚಾಂಗಲೇರಾ, ಇಂದ್ರಾರೆಡ್ಡಿ, ಉಲ್ಲಾಸ್ ರೆಡ್ಡಿ, ಸಂತೋಷ್, ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






