ಬೀದರ್ | ಸಿನಿಮೀಯ ಶೈಲಿಯಲ್ಲಿ 23 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದರೋಡೆ : ಪ್ರಕರಣ ದಾಖಲು

ಬೀದರ್ : ಚಲಿಸುತಿದ್ದ ಕಾರಿಗೆ ಅಡ್ಡವಾಗಿ ಜಾಕ್ ಎಸೆದು ಪಂಚರ್ ಮಾಡಿದ ದರೋಡೆಕೋರರು ಕಾರಿನಲ್ಲಿದ್ದ ಮಹಿಳೆಯರಿಂದ ಸುಮಾರು 23.90 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ 1, 60,000ರೂ ನಗದು ದೋಚಿದ ಘಟನೆ ಬಸವಕಲ್ಯಾಣದ ಹೆದ್ದಾರಿ-65ರಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಯೇಥಗಾಂವ್ ಗ್ರಾಮದ ನಿವಾಸಿಗಳು ತಮ್ಮ ಸಂಬಂಧಿಕರ ಮದುವೆ ರಿಶಪ್ಶನ್ ಸಮಾರಂಭಕ್ಕೆ ತೆರಳುತ್ತಿದ್ದರು. ಬಸವಕಲ್ಯಾಣದ ಬಳಿ 6 ರಿಂದ 8 ಜನರಿದ್ದ ದರೋಡೆಕೊರರ ಗುಂಪು ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಅಡ್ಡಲಾಗಿ ಜಾಕ್ ಹಾಕಿ ಪಂಚರ್ ಮಾಡಿದ್ದಾರೆ. ಬಳಿಕ ಕಾರಿನಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಅವರಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣ ದೋಚಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





