ಬೀದರ್ | ಡಾ.ಅಂಬೇಡ್ಕರ್ ಅವರ ಫೋಟೊಗೆ ಪೂಜೆ ಮಾಡುವ ಮೂಲಕ ಕ್ಷಮೆ ಕೇಳಿದ ಮುಖ್ಯ ಶಿಕ್ಷಕ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಫೋಟೋ ಇಡದ ಪ್ರಕರಣ
ಬೀದರ್ : ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ಇಡದೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಇಂದು ಶಾಲೆಯ ಮುಖ್ಯ ಶಿಕ್ಷಕ ಅಂಬೇಡ್ಕರ್ ಅವರ ಫೋಟೊಗೆ ಪೂಜೆ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಂದೇ ಮಾತರಂ ಎನ್ನುವ ಖಾಸಗಿ ಶಾಲೆಯಲ್ಲಿ ಡಾ.ಅಂಬೇಡ್ಕರ್ ಫೋಟೋ ಇಡದೆ ಅವಮಾನ ಮಾಡಲಾಗಿದೆ ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.
ಸ್ವಾತಂತ್ರ್ಯ ದಿನಾಚರಣೆಯಂದು ಕಡ್ಡಾಯವಾಗಿ ಅಂಬೇಡ್ಕರ್ ಫೋಟೋ ಇಡಬೇಕು ಎನ್ನುವ ನಿಯಮವಿದ್ದರೂ ಕೂಡ, ಅಂಬೇಡ್ಕರ್ ಅವರ ಫೋಟೋ ಇಡಲಿಲ್ಲ. ಬದಲಾಗಿ ಮಹಾತ್ಮಾ ಗಾಂಧಿ, ಸಂಗೊಳ್ಳಿ ರಾಯಣ್ಣ ಮತ್ತು ಭಾರತ ಮಾತೆಯ ಫೋಟೋಗಳು ಮಾತ್ರ ಇಡಲಾಗಿದೆ. ಸರ್ಕಾರದ ಆದೇಶವಿದ್ದರೂ ಕೂಡ ಡಾ.ಅಂಬೇಡ್ಕರ್ ಅವರ ಫೋಟೊ ಇಡದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
Next Story





