ಬೀದರ್ | ಅತಿವೃಷ್ಠಿ : ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಲು ಕನ್ನಡಿಗರ ರಕ್ಷಣಾ ವೇದಿಕೆ ಮನವಿ

ಬೀದರ್ : ಅತಿವೃಷ್ಠಿಯಿಂದ ತತ್ತರಿಸಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಕೃತಿ ವಿಕೋಪ ಘೋಷಣೆ ಮಾಡಿ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಮತ್ತು ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಕನ್ನಡಿಗರ ರಕ್ಷಣಾ ವೇದಿಕೆಯು ಮನವಿ ಮಾಡಿದೆ.
ಸೋಮುವಾರ ಸಹಾಯಕ ಆಯುಕ್ತ ಶಕಿಲ್ ಅಹ್ಮದ್ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ್ ಜಿಲ್ಲೆಯಗಳಲ್ಲಿ ರೈತರು ಬಿತ್ತಿರುವ ಉದ್ದು, ಹೆಸರು, ಸೋಯಾ, ಕಡಲೆ, ಜೋಳ ಮತ್ತು ತೋಗರಿ ಬೆಳೆಗಳು ಹಾಳಾಗಿವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 10 ಸಾವಿರ ಕೋಟಿ ರೂ. ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಕೃಷಿಯಿಂದಲೇ ಜೀವನ ನಡೆಸುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿದ್ದರೆ ದೇಶ ಇರುತ್ತದೆ. ರೈತರು ಇಡಿ ದೇಶಕ್ಕೆ ಅನ್ನ ನೀಡುವ ಅನ್ನದಾತರಾಗಿದ್ದಾರೆ. ಜನಪ್ರತಿನಿಧಿಗಳು, ಸರ್ಕಾರಗಳು ರೈತರ, ಕಾರ್ಮಿಕರ, ಬಡವರ ನೆರವಿಗೆ ಬರಬೇಕಾಗಿದೆ. ಪ್ರತಿ ಎಕರೆ ಭೂಮಿಗೆ 30 ಸಾವಿರ ರೂ. ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಕೊಡಬೇಕು. ಬೀದಿವ್ಯಾಪಾರಿಗಳ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ನೀಡಬೇಕು. ಮೀನು ವ್ಯಾಪರ ಮಾಡುತ್ತಿರುವ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕಾಂತ್ ಭವಾನಿ, ವೀರ ಕನ್ನಡಿಗರ ಸೇನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಕನ್ನಡಿಗರ ರಕ್ಷಣಾ ವೇದಕೆ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ, ವಿಭಾಗಿಯ ಉಪಾಧ್ಯಕ್ಷ ಸೂರ್ಯಕಾಂತ್ ಕನ್ನಾಳೆ, ಜಿಲ್ಲಾ ಉಪಾಧ್ಯಕ್ಷ ಆನಂದ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ್ ಭಾಗ್ಯನೋರ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್ ಮೋರ್ಗಿಕರ್, ಜಿಲ್ಲಾ ಸಹ ಕಾರ್ಯದರ್ಶಿ ಮಾಣಿಕ್ ಮೇತ್ರೆ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ ಔರಾದಕರ್, ಯುವ ಘಟಕದ ಜಿಲ್ಲಾಧ್ಯಕ್ಷ ಸ್ಟಾಲಿನ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಈಶ್ವರ್ ಬಾಚಪಳ್ಳಿ, ಸಂಜುಕುಮಾರ್ ತಡಪಳ್ಳಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಡಿ ಸಿದ್ದಿಕಿ, ಸುಜೀತಕುಮಾರ್ ಕೋಟೆ, ಅಭಿಷೇಕ್ ಕೋಟೆ ಹಾಗೂ ವಿಶ್ವನಾಥ್ ಗಾಯಕವಾಡ್ ಇದ್ದರು.







