ಬೀದರ್ | ಡಿ. 6ರಂದು ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಬೃಹತ್ ಸಮಾವೇಶ : ಪದಾಧಿಕಾರಿಗಳ ನೇಮಕ

ಬೀದರ್ : ವಿವಿಧ ದಲಿತ ಸಂಘಟನೆಗಳ ಯುವ ಒಕ್ಕೂಟದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಬೃಹತ್ ಬಹಿರಂಗ ಸಮಾವೇಶದ ಹಿನ್ನೆಲೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವಿನೀತ್ ಗಿರಿ ಚಿದ್ರಿ ತಿಳಿಸಿದ್ದಾರೆ.
ಡಿ. 6ರಂದು ಸಾಯಂಕಾಲ 5 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯುವ ಒಕ್ಕೂಟದಿಂದ ನಡೆಸುವ ಡಾ.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಸಮಾವೇಶದ ಅಧ್ಯಕ್ಷರಾಗಿ ವಿನೀತ್ ಗಿರಿ ಚಿದ್ರಿ, ಗೌರವಾಧ್ಯಕ್ಷರಾಗಿ ಅಂಬರೀಶ್ ಕುದುರೆ, ಕಾರ್ಯಾಧ್ಯಕ್ಷರಾಗಿ ಪ್ರದೀಪ್ ಕುದುರೆ, ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಬಗದಲಕರ್, ಉಪಾಧ್ಯಕ್ಷರಾಗಿ ಅಖಿಲೇಶ್ ಸಾಗರ್, ರಾಹುಲ್ ಡಾಂಗೆ, ರಮೇಶ್ ಮಾಲೆ, ಖಜಾಂಚಿಯಾಗಿ ಗೌತಮ್ ದೊಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಸಮಿತಿಯ ಹಿರಿಯ ಸಲಹೆಗಾರರಾಗಿ ಸುಬ್ಬಣ್ಣ ಕರಕನಹಳ್ಳಿ, ಸಮಿತಿಯ ಮಾರ್ಗದರ್ಶಕರಾಗಿ ವಿಷ್ಣುವರ್ಧನ್ ವಾಲ್ದೊಡ್ಡಿ, ಸಮಿತಿಯ ಪದಾಧಿಕಾರಿಗಳಾಗಿ ರಾಜಕುಮಾರ್ ಪ್ರಸಾದ್, ಮಾರ್ಟಿನ್ ಕಿಂಗ್ ಹಾಗೂ ಉತ್ತಮ್ ಕೆಂಪೆ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.





