ಬೀದರ್ | ಜೀವನದಲ್ಲಿ ಬಸವಣ್ಣನವರ ವಚನಗಳು ಅಳವಡಿಸಿಕೊಂಡರೆ ಸಮಸ್ಯೆಗಳು ಬರುವುದಿಲ್ಲ : ವೀರಭದ್ರಪ್ಪ ಉಪ್ಪಿನ

ಬೀದರ್ : ಬಸವಣ್ಣನವರ ವಚನಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ನಮಗೆ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳ ಅವಶ್ಯಕತೆಯೂ ಇರುವುದಿಲ್ಲ ಎಂದು ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಬರಿದಶಾಹಿ ಉದ್ಯಾನವನದಲ್ಲಿ ಯೋಗ ಸಾಧಕರಿಂದ ಆಯೋಜಿಸಲಾದ ಬಸವಣ್ಣನವರ 892ನೇ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.
ಹಿರಿಯ ಶರಣೆ ನೀಲಮ್ಮ ರೂಗನ್ ಅವರು ಮಾತನಾಡಿ, ಬಸವಣ್ಣನವರು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿದ್ದ ಕ್ರಾಂತಿಕಾರಿ ಕ್ರಮಗಳಿಂದಲೇ ಇಂದು ಮಹಿಳೆಯರು ಸ್ವಾಭಿಮಾನದಿಂದ ಜೀವಿಸುವುದಕ್ಕೆ ಸಾಧ್ಯವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಯೋಗ ಮೇಲ್ವಿಚಾರಕ ನಂದಕುಮಾರ್ ತಾಂದಳೆ, ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ, ನಿವೃತ್ತ ಪಿಎಸ್ಐ ರೆಡ್ಡಿ, ಡಾ. ಸಿ.ಎಸ್.ಮಾಲಿಪಾಟೀಲ್, ರಾಚಯ್ಯ ಸ್ವಾಮಿ, ಶಂಕರರಾವ್ ಚಿದ್ರಿ, ಗುಂಡಪ್ಪ, ಬಸವರಾಜ್ ಗಾದಾ , ಗೋವರ್ಧನ್ ಸಿoದೋಲ್, ಪವನ್ ಕಣ್ಣಾ, ಸುಮನ್ ಸೂರ್ಯನ್, ಮಹದೇವಪ್ಪ, ರಾಜೀವ್ ನುಕಲವಾರ್, ಅನಂದಾ ಪಾಟೀಲ್, ರಾಮ್ಸಿಂಗ್ ರಾಥೋಡ್, ಮಲ್ಲಿಕಾರ್ಜುನ್ ಪಾಟೀಲ್, ನಿಜಲಿಂಗಪ್ಪ ತಗಾರೆ, ವೀರಶೆಟ್ಟಿ, ರಮೇಶ್ ಕಪಲಾಪುರ್ ಹಾಗೂ ಸುಮಿತ್ರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.







