ಬೀದರ್ | ಮಾತು ಬಾರದ ಮಹಿಳೆಯ ಮೇಲೆ ಅನುಚಿತ ವರ್ತನೆ : ಪ್ರಕರಣ ದಾಖಲು

ಬೀದರ್: ಹಳ್ಳಿಖೇಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತು ಬಾರದ ಹಾಗೂ ಮಾನಸಿಕ ಅಸ್ವಸ್ಥ ಮಹಿಳೆಯೊರ್ವಳ ಮೇಲೆ ಅನುಚಿತ ವರ್ತನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನಲ್ಲಿ, ತಮ್ಮ ಗಂಡ ಕೆಲಸಕ್ಕೆ ತೆರಳಿದ್ದಾಗ ಮಗಳು ಮನೆಯಲ್ಲಿ ಒಬ್ಬಳೇ ಇದ್ದಳು. ಇದೇ ವೇಳೆ ಅಬು ಎಂಬಾತ ಮನೆಗೆ ನುಗ್ಗಿ, ಆಕೆಯ ಬಾಯಿಗೆ ಬಟ್ಟೆ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನಾನು ಈ ವೇಳೆ ಮನೆಗೆ ಬಂದು ಮಗಳನ್ನು ಕೂಗಿದಾಗ, ಆರೋಪಿ ಓಡಿ ಹೋಗಿದ್ದಾನೆ. ಬಳಿಕ ಮಗಳು ಸನ್ನೆಗಳ ಮೂಲಕ ಘಟನೆ ವಿವರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ.
Next Story





