ಬೀದರ್ | ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಸ್ಥಿತಿಗತಿಯ ಚಿಂತನೆ ಅತ್ಯವಶ್ಯಕ : ಅಶ್ವಿನಿ ಮದನಕರ್
![Photo of Program Photo of Program](https://www.varthabharati.in/h-upload/2025/01/11/1314604-whatsapp-image-2025-01-11-at-73808-pm.webp)
ಬೀದರ್ : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಸ್ಥಿತಿಗತಿ ಇಂದಿಗೂ ಚಿಂತನಾಜನಕವಾಗಿದೆ. ಅವರ ಶಿಕ್ಷಣದ ಬಗ್ಗೆ ಚಿಂತನೆ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ವಕೀಲೆ, ಮಹಿಳಾ ಹೋರಾಟಗಾರ್ತಿ ಅಶ್ವಿನಿ ಮದನಕರ್ ಅಭಿಪ್ರಾಯಪಟ್ಟರು.
ಇಂದು ಪಟ್ಟಣದ ಪುರಭವನದಲ್ಲಿ ಎಸ್.ಸಿ/ಎಸ್.ಟಿ ಸರಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ನಡೆದ ʼಸಾವಿತ್ರಿಬಾಯಿ ಫುಲೆ ಜಯಂತಿ ಮಹೋತ್ಸವʼದಲ್ಲಿ ಅವರು ವಿಶೇಷ ಉಪನ್ಯಾಸ ಮಂಡಿಸಿ ಮಾತನಾಡಿದರು.
ನಮ್ಮಲ್ಲಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಅಲ್ಲಿಯ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಂದಿನ ಕಾಲದಲ್ಲಿ ಸಾವತ್ರಿಬಾಯಿ ಫುಲೆಯವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ವೈದಿಕ ಪದ್ಧತಿಯ ಶಿಕ್ಷಣದ ನಿರ್ಮೂಲನೆಗೆ ನಾಂದಿ ಹಾಡಿದರು. ಹೆಣ್ಣು ಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ಕಲಿಸಿದ ಸಾವತ್ರಿಬಾಯಿ ಫುಲೆಯವರು ನಮ್ಮೆಲ್ಲರಿಗೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೌಪಾಲ್ ಭಂತೇಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ್ ಖಂಡ್ರೆ, ಸಾವಿತ್ರಿಬಾಯಿ ಫುಲೆ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಸರೀತಾಕುಮಾರಿ ಗಾಯಕವಾಡ್, ವೈಶಾಲಿ ಮೋರೆ, ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ್ ಹೊಳಕರ್, ವಿಠಲದಾಸ್ ಪ್ಯಾಗೆ ಹಾಗೂ ಕಾಶಿನಾಥ್ ಚಲ್ವಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.