ಬೀದರ್ | ಪತ್ರಕರ್ತ ಅಪ್ಪಾರಾವ್ ಸೌದಿಗೆ ಬೊಮ್ಮನಳ್ಳಿ ಪ್ರಶಸ್ತಿ

ಬೀದರ್ : ಕಲಬುರಗಿ ಜಿಲ್ಲೆಯ ಸೇಡಂನ ಬೊಮ್ಮನಳ್ಳಿ ಪ್ರತಿಷ್ಠಾನದಿಂದ ಪತ್ರಕರ್ತ ವೀರಭದ್ರ ಮಾಮನಿ ಸ್ಮರಣಾರ್ಥ ಕೊಡ ಮಾಡುವ 16ನೇ ವರ್ಷದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಕನ್ನಡಪ್ರಭ ಕಲಬುರಗಿ ಆವೃತ್ತಿ ಮುಖ್ಯಸ್ಥ ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಅಪ್ಪಾರಾವ್ ಸೌದಿ ಅವರನ್ನು ಆಯ್ಕೆ ಮಾಡಲಾಗಿದೆ.
ಜು.23ರಂದು ಬೆಳಿಗ್ಗೆ 10:45ಕ್ಕೆ ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅಪ್ಪಾರಾವ್ ಸೌದಿ ಅವರನ್ನು ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಅಪ್ಪಾರಾವ್ ಸೌದಿ ಅವರಿಗೆ ಪ್ರಶಸ್ತಿ ಲಭಿಸಿದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದಿಂದ ಅಭಿನಂದನೆ ಸಲ್ಲಿಸಲಾಗಿದೆ.
Next Story





