ಬೀದರ್ | ಕಳ್ಳರ ಹಾವಳಿ ತಡೆಗಟ್ಟಲು ಕರವೇ ಮನವಿ

ಬೀದರ್ : ನಗರದಿಂದ ಕಮಠಾಣಾ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಕಳ್ಳರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮನವಿ ಮಾಡಿದೆ.
ಇಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ನಗರದಿಂದ ಕಮಠಾಣಾ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ರಸ್ತೆಯ ಅಕ್ಕ ಪಕ್ಕದಲ್ಲಿ ದಟ್ಟವಾದ ಅರಣ್ಯ ಇದೆ. ಕಳ್ಳರು ಈ ಅರಣ್ಯದ ದುರುಪಯೋಗ ಪಡಿಸಿಕೊಂಡು ವಾಹನ ಚಾಲಕರನ್ನು ರಸ್ತೆಯಲ್ಲಿ ತಡೆದು ಅವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ತಕರಾರು ಮಾಡಿದರೆ ಮಾರಣಾಂತಿಕ ಹಲ್ಲೆ ಕೂಡ ಮಾಡಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಉಪಾಧ್ಯಕ್ಷ ಪ್ರಲ್ಹಾದ್ ಚಿಟ್ಟಾವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪೂರ್, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾಂವ್, ಶಿವು ಚಿಟ್ಟಾವಾಡಿ, ವಿಲಾಸ್ ಪಾಟೀಲ್, ಸಚೀನ್ ಕುದುರೆ, ನಿಲೇಶ್ ರಾಠೋಡ್, ಧನರಾಜ್ ಚಿಟ್ಟಾವಾಡಿ, ಶಿವಕುಮಾರ್ ಮಾಮಡಗಿ, ರಾಜ ಗೊಂಡ, ಅಲೆಕ್ಸಾಂಡರ್ ಕಮಠಾಣ, ಸಂತೋಷ್ ಜೆ ಚಿಟ್ಟಾವಾಡಿ ಹಾಗೂ ಗುರುನಾಥ್ ಉಪಸ್ಥಿತರಿದ್ದರು.





