ಬೀದರ್ | ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಬೀದರ್ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಭಾಲ್ಕಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಪ್ರವೀಣ್ ಮೊರೆ ಅವರು ಮಾತನಾಡಿ, ಮರ ಬೆಳೆಸುವ ಮೂಲಕ ನಾಡು ಉಳಿಸಬೇಕಾಗಿದೆ. ಮರ ಬೆಳೆಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಶುದ್ಧ ಗಾಳಿ, ಶುದ್ಧ ಜಲವಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಬಹುದು ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಭಂತೆ ನೌಪಾಲ್ ಜಿ., ಪ್ರಮುಖರಾದ ಕೀರ್ತಿರತನ್ ಸೋನಾಳೆ, ಪ್ರದೀಪ್ ಭಾವಿಕಟ್ಟೆ, ತುಕಾರಾಮ್ ಕಾಸ್ಲೆ, ಆದೇಶ್ ಭಾವಿಕಟ್ಟೆ, ಸಂಗಮೇಶ್ ರೋಡ್ಡೆ, ಆಶೀಶ್ ಗುಪ್ತಾ, ಸುರೇಶ್ ಭಾವಿಕಟ್ಟೆ, ಸಿದ್ಧಾರ್ಥ ಬೇಂದ್ರೆ, ಸುನಿಲ್ ಸೂರ್ಯವಂಶಿ ಹಾಗೂ ಅಂಕುಶ್ ನಾಟೆಕಾರ್ ಸೇರಿದಂತೆ ಇತರರು ಹಾಜರಿದ್ದರು.
Next Story





