Bidar | AI Summitನಲ್ಲಿ ಕೀರ್ತಿ ಪಂಚಾಳ್ ಗೆ ದ್ವಿತೀಯ ಸ್ಥಾನ

ಬೀದರ್ : ಇತ್ತೀಚಿಗೆ ನಗರದ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಹೀನ್ ನಾಲೇಜ್ ಸಿಟಿಯಲ್ಲಿ 18ರಿಂದ20 ವರ್ಷದ ವಿದ್ಯಾರ್ಥಿನಿಯರಿಗಾಗಿ 'AI She Summit' ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದ ಪಿಪಿಟಿ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಜ್ಞಾನಸುಧಾ ಪದವಿ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿನಿ ಕೀರ್ತಿ ಪಂಚಾಳ್ ಅವರು 'AI Powered women Safety Platform' ಎಂಬ ವಿಷಯದ ಮೇಲೆ ಪೇಪರ್ ಪ್ರಸೆಂಟೇಶನ್ ಮಾಡಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಪೂರ್ಣಿಮಾ ಜಿ., ಸಂಸ್ಥೆಯ ನಿರ್ದೇಶಕ ಡಾ.ಮುನೇಶ್ವರ್ ಲಾಖಾ ಮತ್ತು ಪ್ರಾಂಶುಪಾಲ ಚನ್ನವೀರ್ ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದ್ದು, ಸನ್ಮಾನಿಸಿದ್ದಾರೆ.
ವಿದ್ಯಾರ್ಥಿನಿ ಕೀರ್ತಿ ಪಂಚಾಳ್ ಅವರಿಗೆ ಬಿಸಿಎ ವಿಭಾಗದ ಮುಖ್ಯಸ್ಥೆ ನಾಗೀಣಿ ಪಾಟೀಲ್ ಮಾರ್ಗದರ್ಶನ ನೀಡಿದ್ದರು.
Next Story




