ಬೀದರ್ | ಸ್ವಚ್ಛಂದ ಜೀವನ ನಡೆಸಲು ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ : ನ್ಯಾ.ಪ್ರಕಾಶ್ ಬನಸೋಡೆ

ಬೀದರ್ : ಹುಟ್ಟುವ ಮಗುವಿನಿಂದ ಸಾಯುವ ವಯೋವೃದ್ಧರ ವರೆಗೂ ಸ್ವಚ್ಚಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ತಿಳಿಸಿದರು.
ಗುರುವಾರ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಹಾಗೂ ಕಾರಾಗೃಹದಲ್ಲಿರುವ ಬಂಧಿಗಳ ಹಕ್ಕುಗಳ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಪ್ಪುಗಳು ಸಹಜ ಅವುಗಳನ್ನು ತಿದ್ದಿಕೊಂಡು, ಕೈದಿಗಳು ಮನಪರಿವರ್ತನೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಜೈಲಿನಲ್ಲಿ ದೃಷ್ಠಿದೋಷವಿರುವ ಕೈದಿಗಳಿಗೆ ಕನ್ನಡಕ ವಿತರಿಸಿದರು.
ಈ ಸಂದರ್ಭದಲ್ಲಿ ಎಲ್‌ಎಡಿಸಿ ವಕೀಲ ಅಬ್ದುಲ್ ಹಫೀಝ್, ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಆರ್. ಮೇದಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸನ್ಮುಖಯ್ಯಾ ಬಿ. ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್ ಮಾಲಿಪಾಟೀಲ್, ಕಾನೂನು ಪ್ರಾಧಿಕಾರದ ಸಿಬ್ಬಂದಿ, ಜಿಲ್ಲಾ ಕಾರಾಗೃಹ ಸಿಬ್ಬಂದಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಲ್‌ಎಡಿಸಿ ವಕೀಲರು ಹಾಗೂ ರೋಟರಿ ಕ್ಲಬ್ ಸಿಬ್ಬಂದಿ ಸೇರಿದಂತೆ ಇತರರ ಉಪಸ್ಥಿತರಿದ್ದರು.







