ಬೀದರ್ | ವೈದ್ಯಾಧಿಕಾರಿಯ ತಾಯಿಯಿಂದ ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ್ (ಕೆ) ಗ್ರಾಮದ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ ಅವರ ತಾಯಿಯು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಸಂಗಮೇಶ್ ಬಿರಾದರ್ ಅವರು ಪ್ರಕರಣ ದಾಖಲಿಸಿದ್ದಾರೆ.
ಅ.13 ರಂದು ಚಿಕಿತ್ಸೆ ಪಡೆಯಲೆಂದು ಸಂಗಮೇಶ್ ಅವರು ಧನ್ನೂರ್ (ಕೆ) ಗ್ರಾಮದ ಪ್ರಾಥಮಿಕ ಆರೊಗ್ಯ ಕೇಂದ್ರದ ಆಸ್ಪತ್ರೆಗೆ ಹೊದಾಗ ಸಮಯ 11 ಗಂಟೆಯಾದರು, ವೈದ್ಯಾಧಿಕಾರಿ ಡಾ.ಅಶ್ವಿನಿ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ನಂತರ ಅ.16 ರಂದು ಮತ್ತೆ ಆಸ್ಪತ್ರೆಗೆ ಹೋದಾಗ ಸಮಯ 10:30 ಗಂಟೆಯಾದರು ಡಾ.ಅಶ್ವಿನಿ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಬೇಸತ್ತ ಕಾರಣ ಸಂಗಮೇಶ್ ಅವರು ಡಿಎಚ್ಒ ಅವರಿಗೆ ಫೊನ್ ಕರೆಯ ಮೂಲಕ ದೂರು ನೀಡಿದ್ದರು.
ಡಿಎಚ್ಒ ಅವರಿಗೆ ಫೊನ್ ಕರೆಯ ಮೂಲಕ ತಿಳಿಸಿದ ಬೆನ್ನಲ್ಲೇ, ವೈದ್ಯಾಧಿಕಾರಿ ಡಾ.ಅಶ್ವಿನಿ ಅವರ ತಾಯಿ ಫೊನ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂಗಮೇಶ ಬಿರಾದರ್ ಅವರು ಆರೋಪಿಸಿ ದೂರು ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಗ್ರಾಮಿಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.





