Bidar | ವ್ಯಕ್ತಿ ಕಾಣೆ : ಪತ್ತೆಗಾಗಿ ಮನವಿ

ಬೀದರ್ : ತಾಲ್ಲೂಕಿನ ಮಿರ್ಜಾಪೂರ್ (ತಾಜ) ಗ್ರಾಮದ ನಿವಾಸಿ ಧನರಾಜ್ ಶೇರಿಕಾರ್ (37) ಇವರು ಮೇ.1 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದಾರೆ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಬೀದರ್ ಉಪನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಣೆಯಾಗಿರುವ ವ್ಯಕ್ತಿಯು 5.5 ಫೀಟ್ ಎತ್ತರ ಇದ್ದು, ದಪ್ಪ ಮೈಕಟ್ಟು, ಬಿಳಿ ಮೈಬಣ್ಣ, ನೇರ ಮೂಗು, ಕಪ್ಪು ಬಿಳಿ ಕೂದಲು ಹೊಂದಿದ್ದಾರೆ. ಹೋಗುವಾಗ ಮೈಮೇಲೆ ಪ್ಯಾಂಟ್, ಶರ್ಟ್ ಧರಿಸಿರುವ ಇವರು ಹಿಂದಿ, ಕನ್ನಡ, ಮರಾಠಿ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಪಿಎಸ್‌ಐ 1 ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆ ಮೊಬೈಲ್: 94808 03445 ಅಥವಾ ಬೀದರ್ ನಗರ ವೃತದ ಸಿಪಿಐ ಮೊಬೈಲ್: 94808 03430 ಗೆ ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Next Story




