ಬೀದರ್ | ವ್ಯಕ್ತಿ ಕಾಣೆ : ಪತ್ತೆಗಾಗಿ ಮನವಿ

ಬೀದರ್ : ಹೈದರಾಬಾದ್ ನಿಂದ ನಗರದ ನೌಬಾದ್ ನಲ್ಲಿರುವ ಡೈಮಂಡ್ ಕಾಲೇಜಿನ ಶಾಹು ಮಹಾರಾಜ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗನನ್ನು ಭೇಟಿ ಮಾಡಲು ಬಂದು ವ್ಯಕ್ತಿಯೊರ್ವರು ಕಾಣೆಯಾಗಿದ್ದು, ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ನಗರದ ನೂತನ ಪೊಲೀಸ್ ಠಾಣೆಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನೀಲ್ ಪ್ರಭಾಕರ್ ಬಿರಾದಾರ್ (44) ಎಂಬುವರು ಜೂ.16 ರಂದು ಕಾಣೆಯಾಗಿದ್ದಾರೆ. ಇವರು 5.4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ನೇರ ಮೂಗು, ಕೋಲು ಮುಖ ಹೊಂದಿದ್ದಾರೆ. ಮೈಮೇಲೆ ಪ್ಯಾಂಟ್, ಫುಲ್ ತೋಳಿನ ಶರ್ಟ ಧರಿಸಿರುವ ಇವರು ಮರಾಠಿ, ತೆಲಗು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ್ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮೊಬೈಲ್ ಸಂಖ್ಯೆ: 94808 03446, ಬೀದರ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-226704 ಹಾಗೂ ಬೀದರ್ ನೂತನ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-228256ಗೆ ಸಂಪರ್ಕಿಸಿ ಎಂದು ಅವರು ಕೋರಿದ್ದಾರೆ.





