ಬೀದರ್ | ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಂಗ ಸೆರೆ

ಬೀದರ್ : ಹುಮನಾಬಾದ್ ನಗರದ ಕೋಳಿವಾಡ ಬಡಾವಣೆಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಂಗವೊಂದನ್ನು ಪ್ರಾದೇಶಿಕ ಅರಣ್ಯ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ.
ಕೋಳಿವಾಡ ಬಡಾವಣೆಯಲ್ಲಿ ಮಂಗವೊಂದು ಸಾರ್ವಜನಿಕರಿಗೆ ತುಂಬಾ ತೊಂದರೆ ನೀಡುತ್ತಿತ್ತು. ಇದರ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ, ಹುಮನಾಬಾದ್‌ನ ಪ್ರಾದೇಶಿಕ ಅರಣ್ಯ ವಲಯದ ಅರಣ್ಯ ಅಧಿಕಾರಿ ಐಶ್ವರ್ಯ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ರಾಜಶೇಖರ್ ಧೂಪದ್, ಗಸ್ತು ಅರಣ್ಯ ಪಾಲಕ ಜಗದೇವಪ್ಪ ಸಂತೋಷ್, ಸಂತೋಷ್, ಅರಣ್ಯ ವೀಕ್ಷಕ ಗೊರಕನಾಥ್ ಹಾಗೂ ಮಹೇಶ್ ಸೇರಿದಂತೆ ಸುಮಾರು 15 ಜನರ ತಂಡ ರಚಿಸಿ, ಕಾರ್ಯಚರಣೆ ನಡೆಸಿ ಮಂಗ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗವು ಸಾರ್ವಜನಿಕರಿಗೆ ತುಂಬಾ ತೊಂದರೆ ನೀಡುತ್ತಿತ್ತು. ಮಾಹಿತಿ ತಿಳಿದ ಕೂಡಲೇ ನಾವು ಕಾರ್ಯಚರಣೆ ನಡೆಸಿದೆವು. ಈಗ ಮಂಗ ಸೆರೆ ಹಿಡಿಯಲಾಗಿದ್ದು, ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಅನಾಹುತ ತಪ್ಪಿಸಿದ್ದೇವೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





