ಬೀದರ್ | ಭೀಮಣ್ಣ ಖಂಡ್ರೆ ನಿಧನಕ್ಕೆ ಮುಹಮ್ಮದ್ ಆಸಿಫುದ್ದೀನ್ ಸಂತಾಪ

ಬೀದರ್ : ಹಿರಿಯ ರಾಜಕಾರಣಿ, ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ವಿಸ್ಡ್ಂ ಗ್ರೂಪ್ ಆಫ್ ಇನ್ಸಟಿಟ್ಯೂಷನ್ ಚೇರಮನ್ ಮುಹಮ್ಮದ್ ಆಸಿಫುದ್ದೀನ್ ಇವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ.ಭೀಮಣ್ಣ ಖಂಡ್ರೆ ಅವರು ಒಬ್ಬ ಸಜ್ಜನ ರಾಜಕೀಯ ನಾಯಕರಾಗಿದ್ದರು. ಅವರು ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಭಾವ್ಯಕ್ಯತೆಯ ಸಂಕೇತ (ಐಕಾನ್) ವಾಗಿದ್ದರು. ಈ ಸಂದರ್ಭದಲ್ಲಿ ನಾವು ಅವರ ಕುಟುಂಬ ಬಂದು ಬಳಗದವರೊಂದಿಗೆ ಈ ನೋವಿನಲ್ಲಿ ಸಮಾನವಾಗಿ ಭಾಗಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Next Story





