ಬೀದರ್ | ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ : ಸುರೇಖಾ ಕೆಎಎಸ್

ಬೀದರ್ : ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಕೆಂಪೇಗೌಡರವರಂತಹ ಧೀಮಂತ ವ್ಯಕ್ತಿ, ಸಮರ್ಥ ಆಡಳಿತಗಾರರ ಅವಶ್ಯಕತೆಯಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಕೆ.ಎ.ಎಸ್ ಅವರು ಹೇಳಿದರು.
ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಬೆಂಗಳೂರಿನ ರಚನಾ ವಿನ್ಯಾಸವನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಾಡ ರಕ್ಷಣೆಗಾಗಿಯೇ ಕಂಕಣಬದ್ಧರಾಗಿದ್ದ ಕುಟುಂಬದ ಕುಡಿಯಾಗಿದ್ದ ಕೆಂಪೇಗೌಡರಿಗೆ ವೀರ, ಶೂರ ನಾಯಕತ್ವದ ಸಂಸ್ಕೃತಿ ರಕ್ತಗತವಾಗಿಯೇ ಬಂದಂತಿದೆ. ಹೀಗಾಗಿಯೇ ಅವರ ಆಡಳಿತ, ಕಾರ್ಯಗಳು ಅಜರಾಮರವಾಗಿವೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ.ಟಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





