ಬೀದರ್ | ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ವಾರ್ಷಿಕೊತ್ಸವದ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಣೆ

ಬೀದರ್ : ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ನ ಒಂದನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತವಾಗಿ ಇಂದು ನಗರದ ಜಿಲ್ಲಾ ಸರ್ಕಾರಿ ಬ್ರೀಮ್ಸ್ ಆಸ್ಪತ್ರೆಯಲ್ಲಿ ಸುಮಾರು 300 ರೋಗಿಗಳಿಗೆ ಹಣ್ಣು ಮತ್ತು ಶುದ್ಧ ಕುಡಿಯುವ ನೀರಿನ ಬಾಟಲ್ ವಿತರಿಸಲಾಯಿತು.
ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸ್ಠೀಫನ್ ಅವರು ಮಾತನಾಡಿ, ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ನ ಉದ್ದೇಶವೆನೆಂದರೆ, ನೊಂದವರಿಗೆ, ನಿರಾಸೆಯಲ್ಲಿದ್ದವರ ಬದುಕಲ್ಲಿ ಹೊಸ ಬೆಳಕು ಮೂಡಿಸುವುದಾಗಿದೆ. ಮುಂಬರುವ ದಿನಗಳಲ್ಲಿ ರಕ್ತದಾನ ಶಿಬಿರಗಳು ಮಾಡುತ್ತೇವೆ. ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರಗಳು ಹಾಗೂ ಗ್ರಾಮಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ನೋಟ್ ಬುಕ್, ಪೆನ್ನು ವಿತರಣೆ ಮಾಡುತ್ತೇವೆ. ಈ ರೀತಿಯಾಗಿ ಅನೇಕ ಹಲವಾರು ಯೋಜನೆಗಳು ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಹಮ್ಮಿಕೊಳ್ಳಲಾಗುವುದು. ಇಲ್ಲಿನ ರೋಗಿಗಳು ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಸೇರಲಿ ಎಂದರು.
ಈ ಸಂದರ್ಭದಲ್ಲಿ ನ್ಯೂ ಲೈಟ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಅಬ್ರಹಂ, ಕಾರ್ಯದರ್ಶಿಗಳಾದ ಡೇವಿಡ್, ಪ್ರವೀಣಕುಮಾರ್, ಯಶವಂತ್, ಸೈಮನ್, ಸಾಮುವೆಲ್ , ಡೇವಿಡ್, ಹಾಗೂ ಪಾಸ್ಟರ್ ಶ್ರೀಕಾಂತ್ ಅವರು ಉಪಸ್ಥಿತರಿದ್ದರು.





