ಬೀದರ್ | ಪೋಷಕರು ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡಬೇಕು : ಕಿರಣ್ ಪಾಟೀಲ್

ಬೀದರ್ : ಪೋಷಕರು ತಮ್ಮ ಮಕ್ಕಳ ಲಾಲನೆ ಪಾಲನೆ ಚೆನ್ನಾಗಿ ಮಾಡಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ತಿಳಿಸಿದರು.
ಇಂದು ಬೀದರ್ ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕೂಸಿನ ಮನೆ ಮಕ್ಕಳ ಆರೈಕೆದಾರರಿಗೆ ತರಬೇತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 124 ಜನರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಸರ್ಕಾರ ಇದಕ್ಕಾಗಿಯೇ ಸಾಕಷ್ಟು ಮುತುವರ್ಜಿವಹಿಸುತ್ತಿದೆ. ಇದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳು ತಂದಿದೆ. ಆದ್ದರಿಂದ ಪೋಷಕರಾದ ನೀವು ಕೂಡ ತಮ್ಮ ಮಕ್ಕಳಿಗೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ್, ತರಬೇತಿದಾರರಾದ ನರಸಮ್ಮ ,ಪ್ರಿಯಾಂಕಾ, ಮಾಲಾಶ್ರೀ, ಐಇಸಿ ಸಂಯೋಜಕ ಸತ್ಯಜೀತ್ ನೀಡೋದಕರ್ ಹಾಗೂ ಕೂಸಿನ ಮನೆ ಆರೈಕೆದಾರರು ಸೇರಿದಂತೆ ಇತರರು ಹಾಜರಿದ್ದರು.
Next Story







