ಬೀದರ್ | ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿ : ವಸತಿ ನಿಲಯದ ಅಡುಗೆ ಸಹಾಯಕ ಕರ್ತವ್ಯದಿಂದ ಬಿಡುಗಡೆ

ಬೀದರ್ : ಆರೆಸ್ಸೆಸ್ ಪಥ ಸಂಚಲನದಲ್ಲಿ ಗಣವೇಶ ಧರಿಸಿ ಭಾಗಿಯಾದ ಬಸವಕಲ್ಯಾಣ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೊರಸಂಪನ್ಮೂಲದಿಂದ ಅಡುಗೆ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಬಸವಕಲ್ಯಾಣದಲ್ಲಿ ಇತ್ತೀಚಿಗೆ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಪ್ರಮೋದಕುಮಾರ್ ಅವರು ಗಣವೇಷ ಧರಿಸಿ ಭಾಗವಹಿಸಿದ್ದರು. ಇದರ ವಿರುದ್ಧ ಗಗನ್ ಫುಲೆ ಅವರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ವಾಟ್ಸಪ್ ಮೂಲಕ ದೂರು ನೀಡಿದ್ದರು. ಈ ದೂರನ್ನು ಅಧರಿಸಿ ಪ್ರಮೋದಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಪ್ರಮೋದಕುಮಾರ್ ಅವರು ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೊರ ಸಂಪನ್ಮೂಲದಿಂದ ಅಡುಗೆ ಸಹಾಯಕರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರಕಾರದಿಂದ ವೇತನ ಪಡೆಯುತ್ತಿರುವ ಖಾಯಂ, ಹೊರಸಂಪನ್ಮೂಲ ಸಿಬ್ಬಂದಿಯವರು ಯಾವುದೇ ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಿರುವುದು ಕಾನೂನಿನ ಪ್ರಕಾರ ನಿಷೇಧವಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.





