ಬೀದರ್ | 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಿದರೆ ದಂಡ : ನ್ಯಾ.ಸಚಿನ್ ಕೌಶಿಕ್

ಬೀದರ್ : 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಿದರೆ 25 ಸಾವಿರ ರೂ. ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಅವರು ನುಡಿದರು.
ಇಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಮೋಟಾರ್ ವಾಹಾನ ತರಬೇತಿ ಶಾಲೆ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ʼ36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಕಾರು ಚಾಲಕರು ಕಡ್ಡಾಯವಾಗಿ ಸೀಟ ಬೆಲ್ಟ್ ಹಾಕಿಕೊಂಡು ಚಾಲನೆ ಮಾಡಬೇಕು. ಮದ್ಯಪಾನ, ಧೂಮಪಾನ ಮತ್ತು ಗುಟಖಾ ತಿಂದು ಚಾಲನೆ ಮಾಡಿದರೆ ಅಪಘಾತ ಸಂಭವಿಸಬಹುದು. ಚಾಲಕರು ನಶೆ ಮಾಡದೇ ವಾಹನ ಚಲಾಯಿಸಬೇಕು. ಕಡ್ಡಾಯವಾಗಿ ವಿಮಾ ಮಾಡಿಸಬೇಕು. ಒಂದು ವೇಳೆ ರಸ್ತೆ ಅಪಘಾತವಾದರೆ ವಾಹನದ ಮೇಲೆ ವಿಮೆ ಇಲ್ಲದೇ ಹೋದರೆ ಅಪಘಾತಕ್ಕೊಳಗಾದ ವ್ಯಕ್ತಿಗೆ ದಂಡದ ಹಣ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದ್ಯಸ ಕಾರ್ಯದರ್ಶಿ ಪ್ರಕಾಶ್ ಬನ್ಸೋಡೆ ಅವರು ಮಾತನಾಡಿ, ರಸ್ತೆ ಮೇಲೆ ಬರುವ ಪಾದಚಾರಿಗಳು ರಸ್ತೆ ಬದಿ ಇರುವ ಫುಟಪಾತ್ ಉಪಯೋಗಿಸಬೇಕು. ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುವುದರಿಂದ ರಸ್ತೆ ಅಪಘಾತ ಕಡಿಮೆ ಮಾಡಲು ಸಾಧ್ಯ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶಿಲವಂತ್ ಅವರು ಮಾತನಾಡಿ, ದ್ವಿಚಕ್ರ ವಾಹಾನದ ಮೆಲೆ ಇಬ್ಬರಿಗಿಂತ ಹೆಚ್ಚು ವಿಧ್ಯಾರ್ಥಿಗಳು ಸವಾರಿ ಮಾಡಬಾರದು. ಅಪಘಾತಕ್ಕೆ ಓಳಗಾದ ವ್ಯಕ್ತಿಗೆ ಮೊದಲು ತಲೆಗೆ ಪೆಟ್ಟು ಬಿಳುವುದು ಆದುದರಿಂದ ಕಡ್ಡಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು. ವಾಹನ ಅತಿ ವೇಗವಾಗಿ ಓಡಿಸಬಾರದು ಎಂದು ತಿಳಿಸಿದರು.
ಜಂಟಿ ಸಾರಿಗೆ ಅಯುಕ್ತ ಸಿದ್ದಪ್ಪಾ ಎಚ್ ಕಲ್ಲೇರ್ ಅವರು ಮಾತನಾಡಿ, ರಸ್ತೆ ಅಪಘಾತಗಳಿಂದ ಲಕ್ಷಾಂತರ ಜನ ಅಂಗವಿಕಲರಾಗುತ್ತಿದ್ದಾರೆ. ಪಯಣಿಸುವಾಗ ಸವಾರರು ಮೊಬೈಲ್ ಬ್ಲುಟುಥ್, ಹೆಡ್ ಪೋನ್ ಬಳಸಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಿರಾದರ್, ಮೋಟಾರ್ ವಾಹನ ತರಬೇತಿ ಶಾಲೆಯ ಸಂಘದ ಅಧ್ಯಕ್ಷ ಪ್ರಕಾಶ್ ಗುಮ್ಮೆ, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಪ್ರವಿಣ್, ಸಿ. ಈರಮ್ಮಾ, ಅಶ್ವಿನ್ ರೆಡ್ಡಿ, ಸಂಘದ ರಾಜ್ಯ ಉಪಾಧ್ಯಕ್ಷ ಶಿವರಾಜ್ ಜಮಾದಾರ್, ಮಲ್ಲಿಕಾರ್ಜುನ್, ಸುಧಾಕರ ಬಿರಾದಾರ್ ಹಾಗೂ ಉಮೇಶ ಘುಳೆ ಸೇರಿದಂತೆ ಇತರರು ಭಾಗವಹಿಸಿದ್ದರು.







