ಬೀದರ್ | ಬಾವಿಗೆ ಬಿದ್ದು ಅಂಚೆ ಕಚೇರಿ ಸಿಬ್ಬಂದಿ ಮೃತ್ಯು

ಬೀದರ್ : ಬಾವಿಗೆ ಬಿದ್ದು ಅಂಚೆ ಕಚೇರಿ ಸಿಬ್ಬಂದಿಯೊರ್ವರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದಲ್ಲಿ ನಡೆದಿದೆ.
ಖುತ್ಬುದ್ದಿನ್ ನಿಜಾಮ್ ಶೇಕ್ (40) ಬಾವಿಗೆ ಬಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಿಜಾಮ್ ಶೇಕ್ ಅಂಚೆ ಕಚೇರಿಯಲ್ಲಿ ಗ್ರೂಪ್ ಡಿ ಹುದ್ದೆಯಲ್ಲಿದ್ದು, ಕುಡಿಯುವ ಚಟದಲ್ಲಿದ್ದರು. ಬುಧವಾರದಂದು ಬಾವಿಗೆ ಬಿದ್ದಿದ್ದು, ಗುರುವಾರ ಈತನು ಬಾವಿಗೆ ಬಿದ್ದ ಮಾಹಿತಿ ತಿಳಿದಿದೆ ಎನ್ನಲಾಗಿದೆ.
ಈ ಘಟನೆ ಕುರಿತು ಮಂಠಾಳ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





