Bidar | ಮೇ 4 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಬೀದರ್ : ಹುಮನಾಬಾದ್ ಕಾರ್ಯ ಮತ್ತು ಪಾಲನೆ ವಿಭಾಗ ಗುವಿಸಕಂ ವ್ಯಾಪ್ತಿಯಲ್ಲಿ ಬರುವ 220 ಕೆ.ವಿ ಹುಮನಾಬಾದ್ ವಿದ್ಯುತ್ ಸ್ವೀಕರಣ ಕೇಂದ್ರದ 10ಎಂವಿಎ, 110/11ಕೆ.ವಿ ಪರಿವರ್ತಕದ ತುರ್ತು ಕೆಲಸದ ಪ್ರಯುಕ್ತ ಮೇ 4 ರಂದು ಬೆಳಿಗ್ಗೆ 8 ರಿಂದ 1 ಗಂಟೆವರೆಗೆ 11ಕೆವಿ ಕೆಐಡಿಬಿ, 11ಕೆವಿ ಮುಸ್ತಾಪುರ್, 11ಕೆವಿ ಆರ್ ಟಿ ಒ, 11ಕೆವಿ ನೇಕ್ಟರ್ ಮತ್ತು 11ಕೆವಿ ಇಂಡಸ್ಟ್ರಿಯಲ್ ಫೀಡರ್ ಮಾರ್ಗದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಹುಮನಾಬಾದ್ 220ಕೆವಿ ಕಾರ್ಯಚರಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story




