Bidar | ಸೆ. 26ರಂದು ವಿದ್ಯುತ್ ವ್ಯತ್ಯಯ

ಬೀದರ್: 110 ಕೆ.ವಿ. ಹುಮನಾಬಾದ್ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂನ ಹುಮನಾಬಾದ್ 220 ಕೆ.ವಿ. ಸ್ವೀಕರಣ ಕೇಂದ್ರದ ಇಂಜಿನಿಯರ್ ಜಗನ್ನಾಥ್ ಖೇರೋಜಿ ತಿಳಿಸಿದ್ದಾರೆ.
ತುರ್ತು ಕಾಮಗಾರಿಯಿಂದ 110 ಕೆ.ವಿ. ಹುಮನಾಬಾದ್ ಉಪಕೇಂದ್ರ ವ್ಯಾಪ್ತಿಯ 33 ಕೆ.ವಿ. ಹುಡಗಿ, ಘಾಟಬೋರಾಳ್ ಹಾಗೂ ಕೆ.ಪಿ. ಮಿಲ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಅದೇ ರೀತಿ 11 ಕೆ.ವಿ. ಹುಮನಾಬಾದ್ ನಗರ, ಮೊಳಕೇರಾ, ಕಲ್ಲೂರಾ, ಸೇಡೋಳ್, ಹಣಕುಣಿ, ಕನಕಟ್ಟಾ, ಮಾಣಿಕನಗರ, ನಂದಗಾವ್, ಕೆಎಚ್‌ಬಿ ಕಾಲೋನಿ, ಶಿವನಗರ ಸೇರಿದಂತೆ ಜೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿಗದಿತ ಅವಧಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಮನವಿ ಮಾಡಿದೆ.




